ಡೆಹ್ರಾಡೂನ್(ಉತ್ತರಾಖಂಡ): ಡೆಹ್ರಾಡೂನ್ನಲ್ಲಿ ನವೆಂಬರ್ 12 ರಂದು ಟೊಯೊಟಾ ಇನ್ನೋವಾ ಎಸ್‌ಯುವಿ ಕಾರು ನಿಂತಿದ್ದ ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದರು. ಕಾರಿನ ಬ್ರೇಕ್ನ ಅಡಿ ನೀರಿನ ಬಾಟಲಿ ಸಿಲುಕಿಕೊಂಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್, ಅತಿಯಾದ ವೇಗ ಮತ್ತು ವಾಹನದ ಬ್ರೇಕ್ ಕೆಳಗೆ ನೀರಿನ ಬಾಟಲಿ ಸಿಲುಕಿಕೊಂಡಿದ್ದೆ ಅಪಘಾತಕ್ಕೆ ಕಾರಣವಾಗಿರಬಹುದು. ಅಪಘಾತಕ್ಕೂ ಮೊದಲು ಅಪಘಾತಕ್ಕೀಡಾದ ಎಸ್‌ಯುವಿ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ರೇಸಿಂಗ್ ನಡೆಯುತ್ತಿತ್ತು ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.
ಕಾರು ಅಪಘಾತಕ್ಕೀಡಾದ ಸ್ಥಳದಿಂದ 500 - 700 ಮೀಟರ್ ಹಿಂದೆಯೇ ಅತಿಯಾದ ವೇಗದಲ್ಲಿ ಚಲಿಸುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂದು ಎರಡು ಕಾರುಗಳು ಒಟ್ಟಿಗೆ ವೇಗವಾಗಿ ಹೋಗುತ್ತಿದ್ದನ್ನು ಗಮನಿಸಿದ ಪೊಲೀಸರು, ಕಾರುಗಳ ಮಧ್ಯೆ ರೇಸಿಂಗ್ ನಡೆದಿರಬಹುದು ಎಂದು ಊಹಿಸಿದ್ದರು. ಆದರೆ, ತನಿಖೆಯಲ್ಲಿ ರೇಸಿಂಗ್ ನಡೆದಿರುವುದು ಕಂಡು ಬಂದಿಲ್ಲ. ಪೊಲೀಸರು ಮತ್ತೊಂದು ಕಾರು ಚಾಲಕನನ್ನು ವಿಚಾರಿಸಿದಾಗ ಪರಿಚಯಸ್ಥರನ್ನು ಭೇಟಿ ಮಾಡಲು ಮ್ಯಾಕ್ಸ್ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿದ್ದಾನೆ. ಒಎನ್‌ಜಿಸಿ ಚೌಕ್ ಬಳಿ ನಿಂತಿದ್ದ ಕಂಟೈನರ್ಗೆ ಹಿಂದಿನಿಂದ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ ಎಂದರು.