ಕರ್ನಾಟಕ

karnataka

ETV Bharat / bharat

ಅಫ್ಜಲ್​ಗಂಜ್​ ಗುಂಡಿನ ದಾಳಿ ಬೆನ್ನಲ್ಲೇ ಕೇಳಿ ಬಂತು ಪೊಲೀಸರಿಗೂ ಶಸ್ತ್ರಾಸ್ತ್ರ ನೀಡಬೇಕು ಎಂಬ ಕೂಗು - AFZALGANJ FIRING INCIDENT

ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳು ಕಂಡು ಬರುತ್ತಿದ್ದು, ಇದು ಪೊಲೀಸರಿಗೂ ಶಸ್ತ್ರಾಸ್ತ್ರ ನೀಡಬೇಕು ಎಂಬ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

Push for Police Armament Rekindled After Afzalganj Firing Incident
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Jan 20, 2025, 12:52 PM IST

ಹೈದರಾಬಾದ್​: ತೆಲಂಗಾಣದಲ್ಲಿ ಬಂದೂಕು ಸಂಬಂಧಿತ ಅಪರಾಧಿ ಕೃತ್ಯಗಳ ಸಂಖ್ಯೆ ಏರ ತೊಡಗಿದ್ದು, ಅಫ್ಜಲ್​ಗಂಜ್​ ಘಟನೆ ಬಳಿಕ ಪೊಲೀಸರು ಮತ್ತಷ್ಟು ಬಿಗಿಯಾದ ಕ್ರಮಕ್ಕೆ ಮುಂದಾಗಿದ್ದಾರೆ. ಹೆಚ್ಚುತ್ತಿರುವ ಅಪರಾಧ ಪ್ರಕರಣ ತಡೆ ಹಾಗೂ ರಕ್ಷಣೆಗಾಗಿ ತಮ್ಮ ಸಿಬ್ಬಂದಿಗಳಿಗೂ ಶಸ್ತ್ರಾಸ್ತ್ರ ನೀಡಿ ಅವರಿಗೆ ಬಲ ನೀಡಬೇಕು ಎಂಬ ಕುರಿತು ಚರ್ಚೆ ನಡೆದಿದೆ , ಈ ಕುರಿತು ಶೀಘ್ರವೇ ಆದೇಶ ಹೊರ ಬೀಳುವ ಸಾಧ್ಯತೆಗಳೂ ಇವೆ.

ಕಳೆದ 9 ವರ್ಷಗಳ ಹಿಂದೆ ಸೂರ್ಯಾಪೇಟ್​​ ಬಸ್​ ನಿಲ್ದಾಣದಲ್ಲಿ ಎಸ್​ಐಎಂಐ ಭಯೋತ್ಪಾದಕರು ಇಬ್ಬರು ಶಸ್ತ್ರಾಸ್ತ್ರ ಹೊಂದಿರದ ಪೊಲೀಸರ ಮೇಲೆ ದಾಳಿ ನಡೆಸಿದ ದುರ್ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಪೊಲೀಸ್​ ಸಿಬ್ಬಂದಿಗೂ ಶಸ್ತ್ರಾಸ್ತ್ರ ನೀಡಬೇಕು ಎಂಬ ಪ್ರಸ್ತಾವನೆ ಆಗ ಕೇಳಿ ಬಂದಿತ್ತಾದರೂ ಬಳಿಕ ಅದು ತೆರೆಮರೆಗೆ ಸರಿಯಿತು.

ಹಿಂದೆ ಆಂಧ್ರಪ್ರದೇಶದಲ್ಲಿ ಎಡಪಂಥೀಯ ಉಗ್ರವಾದದ ಉತ್ತುಂಗದಲ್ಲಿದ್ದಾಗ, ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳು ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾಗಿದ್ದು, ಈ ರೀತಿಯ ದಾಳಿಗಳನ್ನು ಎದುರಿಸಲು ಸಜ್ಜಾಗಿದ್ದವು. ಹಿರಿಯ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳು ಶಸ್ತ್ರಸಜ್ಜಿತರಾಗಿದ್ದು, ಸಶಸ್ತ್ರ ಗಾರ್ಡ್‌ಗಳೊಂದಿಗೆ ಸೆಂಟ್ರಿ ಪೋಸ್ಟ್‌ಗಳನ್ನು ಸನ್ನದ್ಧವಾಗಿಡಲಾಗುತ್ತಿತ್ತು. ಆದರೆ, ಮಾವೋವಾದಿಗಳ ಬೆದರಿಕೆ ಕಡಿಮೆಯಾದಂತೆ, ಈ ನೀತಿಯಲ್ಲಿ ಬದಲಾವಣೆ ಆಯಿತು.

ಮಾವೋ ಪೀಡಿತ ಪ್ರದೇಶದಲ್ಲಿ ಅಧಿಕಾರಿಗಳಿಗೆ ಪಿಸ್ತೂಲ್​ನಂತಹ ಸಣ್ಣ ಶಸ್ತ್ರಾಸ್ತ್ರಗಳಿಗೆ ಸೀಮಿತವಾಗಿದೆ. ನಗರದಲ್ಲಿರುವ ಭದ್ರತಾ ಕರ್ತವ್ಯದಲ್ಲಿ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿಲ್ಲ. ಪೊಲೀಸರಿಗೆ ಶಸ್ತ್ರಾಸ್ತ್ರ ಬೇಕು ಬೇಕು ಎಂಬ ಬೇಡಿಕೆ ಹೊಸದೆನಲ್ಲ. ಅನೇಕ ಹಳೆಯ ಘಟನೆಗಳು ಈ ಬೇಡಿಕೆಯನ್ನು ಪುಷ್ಠಿಕರಿಸಿದೆ.

  • 2009-10: ಭಯೋತ್ಪಾದಕ ವಿಕರುದ್ಧೀನ್​ ಶಸ್ತ್ರಾಸ್ತ್ರ ಹೊಂದಿರದ ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದಲ್ಲದೇ ಐದು ಮಂದಿಯನ್ನು ಗಾಯಗೊಳಿಸಿದ್ದ.
  • 2014: ಸೈಬರ್​ಬಾದ್​ನಲ್ಲಿ ನಕಲಿ ನೋಟು ಚಲಾವಣೆ ಸಂಬಂಧ ಬಂಧನಕ್ಕೆ ಮುಂದಾದಾಗ ರೌಡಿ ಶೀಟರ್​ ಎಲಂ ಗೌಡ ಕಾನ್ಸ್​ಟೇಬಲ್​ ಈಶ್ವರಯ್ಯ ಅವರನ್ನು ಗುಂಡಿಕ್ಕಿ ಕೊಂದಿದ್ದ.
  • 2015: ಸೂರ್ಯಾ ಪೇಟ್​​ ಬಸ್​ ನಿಲ್ದಾಣದಲ್ಲಿ ಇಬ್ಬರಿ ಸಿಮಿ ಭಯೋತ್ಪಾದಕರು ಕಾನ್ಸ್​ಟೇಬಲ್​ ಮೆಟ್ಟು ಲಿಂಗಯ್ಯ ಮತ್ತು ಹೋಂ ಗಾರ್ಡ್​​ ಕುಮ್ಮರಿ ಮಹೇಶ್​​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹಾಗೇ ಎಸ್​​ಎಸ್​ ಸಿದ್ಧಯ್ಯ ಮತ್ತು ಕಾನ್ಸ್​ಟೇಬಲ್​ ನಾಗರಾಜ್​ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದರು.

2015ರ ಸೂರ್ಯಾಪೇಟ್​ ಘಟನೆ ಬಳಿಕ ಅಧಿಕಾರಿಗಳ ಪ್ರಸ್ತಾವನೆ:ಎಸ್​ಸಿ ರ‍್ಯಾಂಕ್​ ಮತ್ತು ಮೇಲಿನ ಹುದ್ದೆಗಳಿಗೆ ಶಸ್ತ್ರ ನೀಡುವಂತೆ ಬೇಡಿಕೆ ಸಲ್ಲಿಕೆ ಮಾಡಲಾಗಿದೆ. ಉಪ ವಿಭಾಗೀಯ ಮಟ್ಟದಲ್ಲಿ ಶಸ್ತ್ರಾಸ್ತ್ರ ತ್ವರಿತ ಪ್ರತಿಕ್ರಿಯ ತಂಡವನ್ನು ರಚನೆ ಮಾಡುವುದರ ಕುರಿತಂತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ದುರಾದೃಷ್ಟವಶಾತ್​ ಈ ಪ್ರಸ್ತಾವನೆಗಳು ಜಾರಿಯಾಗಲಿಲ್ಲ.

ಮತ್ತೆ ಕಾಡಿದ ಆತಂಕ:ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳು ಕಂಡು ಬರುತ್ತಿದ್ದು, ಇದು ಪೊಲೀಸರು ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಿಸಿದೆ. ಕರ್ನಾಟಕದ ಬೀದರ್​ನಲ್ಲಿ ದರೋಡೆ ಮತ್ತು ಹೈದರಾಬಾದ್​ ಘಟನೆಗಳು ಈ ಕುರಿತು ತುರ್ತು ಕ್ರಮಕ್ಕೆ ಒತ್ತಾಯಿಸಿದೆ. ಅಧಿಕಾರಿಗಳು ಕೂಡ ಈ ಸಿಬ್ಬಂದಿಗಳಿಗೆ ಶಸ್ತ್ರಾಸ್ತ್ರ ನೀಡುವ ಕುರಿತು ಪ್ರಸ್ತಾವನೆಗೆ ಒತ್ತು ಕೊಟ್ಟಿದ್ದು, ಕಾನೂನು ಸುರಕ್ಷತೆ ಹೆಚ್ಚಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮಹಾ ಕುಂಭ: 100ಕ್ಕೂ ಹೆಚ್ಚು ನಾಗ ಸನ್ಯಾಸಿನಿಯರಿಗೆ ದೀಕ್ಷೆ ಪ್ರಕ್ರಿಯೆ: 3 ವಿದೇಶಿ ಮಹಿಳೆಯರಿಗೂ ದೀಕ್ಷೆ

ABOUT THE AUTHOR

...view details