ಅಂಬಿಕಾಪುರ, ಛತ್ತೀಸ್ಗಢ: ಭಾರತೀಯ ಸೇನೆಯ ಶೌರ್ಯ ಟಿ55 ಟ್ಯಾಂಕ್ ಛತ್ತೀಸ್‌ಗಢದ ಅಂಬಿಕಾಪುರದಲ್ಲಿರುವ ಸೈನಿಕ ಶಾಲೆಯಲ್ಲಿ ಬುಧವಾರ ಸ್ಥಾಪಿಸಲಾಗಿದೆ. ಭಾರತೀಯ ಸೇನೆಯ ನಿವೃತ್ತ ಯುದ್ಧ ಟ್ಯಾಂಕ್ ಇದಾಗಿದೆ. ಅಂಬಿಕಾಪುರ ಶಾಸಕ ರಾಜೇಶ್ ಅಗರ್ವಾಲ್ ಮತ್ತು ಶಾಲೆಯ ಉಪ ಪ್ರಾಂಶುಪಾಲ ಪಿ ಶ್ರೀನಿವಾಸ್ ಅಧಿಕೃತವಾಗಿ ಶಾಲೆಯ ಮುಖ್ಯ ದ್ವಾರದಲ್ಲಿ ಈ ಟಾಂಕರ್ ಅನಾವರಣಗೊಳಿಸಿದರು.
ದೇಶಪ್ರೇಮದ ಭಾವನೆ ಹೆಚ್ಚಿಸಲು ಅಳವಡಿಕೆ: ಅಂಬಿಕಾಪುರದ ಸೈನಿಕ ಶಾಲೆಯಲ್ಲಿ ಟಿ 55 ಟ್ಯಾಂಕ್ ಅಳವಡಿಸುವುದರಿಂದ ಜನರಲ್ಲಿ ದೇಶಪ್ರೇಮದ ಭಾವನೆ ಹೆಚ್ಚುತ್ತದೆ. ಇದರೊಂದಿಗೆ ಈ ಭಾಗದ ಯುವಕರು ಸೇನೆ ಸೇರಲು ಸ್ಫೂರ್ತಿ ಆಗಲಿದೆ. ಅಂಬಿಕಾಪುರ ಮತ್ತು ಸುರ್ಗುಜಾದ ಜನರು ಈ ಟ್ಯಾಂಕ್ ನೋಡುವ ಮೂಲಕ ಸೈನ್ಯದ ನೆನಪುಗಳು ಮತ್ತು ಆಗಿನ ಸಾಹಸಗಾಥೆಗಳನ್ನು ಕೇಳಿ ತಿಳಿದುಕೊಳ್ಳಲು ಇದು ಸಹಕಾರಿ ಆಗಲಿದೆ. ಈ ಶಾಲೆಯಲ್ಲಿ ಟ್ಯಾಂಕ್ ಅಳವಡಿಕೆಯಾದ ಮೇಲೆ ಎಲ್ಲ ಸೈನಿಕ ಶಾಲೆಯ ಕೆಡೆಟ್‌ಗಳು, ಸ್ಥಳೀಯ ಜನರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಟಿ 55 ಟ್ಯಾಂಕ್ ನೋಡಿ ಖುಷಿ ಪಟ್ಟರು.
T 55 ಟ್ಯಾಂಕ್ ಗಿದೆ ಅದ್ಭುತ ಇತಿಹಾಸ: T 55 ಟ್ಯಾಂಕ್‌ಗೆ ಭಾರತೀಯ ಸೇನೆಯಲ್ಲಿ ಭವ್ಯ ಇತಿಹಾಸವಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಈ ಟ್ಯಾಂಕ್ ಅದ್ಭುತ ಪಾತ್ರ ವಹಿಸಿತ್ತು. ಈ ಟ್ಯಾಂಕ್‌ನ ಸಹಾಯದಿಂದ ಭಾರತೀಯ ಸೇನೆಯು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನಿ ಸೈನಿಕರನ್ನು ಶರಣಾಗುವಂತೆ ಮಾಡುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ. ಈ ಯುದ್ಧ ಟ್ಯಾಂಕರ್ನ ಭವ್ಯ ಇತಿಹಾಸದ ಕಥೆಗಳನ್ನು ಕೇಳಿದರೆ ಜನರ ಎದೆಯಲ್ಲಿ ಹೆಮ್ಮೆ ಮೂಡದೇ ಇರದು. ಈ ಟ್ಯಾಂಕ್ 72 ಆರ್ಮರ್ ರೆಜಿಮೆಂಟ್‌ಗೆ ಸೇರಿದ್ದಾಗಿದೆ. ಈ ರೆಜಿಮೆಂಟ್ ಚಾಮ್ ಕದನದಲ್ಲಿ ಭಾಗವಹಿಸಿತ್ತು. ಈ ಟ್ಯಾಂಕ್ ನ ಫೈರಿಂಗ್ ರೇಂಜ್ 14 ಕಿಲೋಮೀಟರ್ ಎಂಬುದು ಗಮನಾರ್ಹ.