ನವದೆಹಲಿ: ಇಂದು 2025ರ ಹೊಸ ವರ್ಷದ ಮೊದಲ ದಿನ. ಈ ಹಿನ್ನೆಲೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯ ಕೋರಿದ್ದಾರೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ವರ್ಷವು ಹೊಸ ಅವಕಾಶ, ಯಶಸ್ಸು ಮತ್ತು ನಿರಂತರ ಸಂತಸ ತರಲಿ ಎಂದು ಆಶಿಸುತ್ತೇನೆ. 2025ರ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಅದ್ಭುತ ಆರೋಗ್ಯ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಹೊಸ ವರ್ಷದ ಶುಭಾಶವನ್ನು ಕೋರಿದ್ದು, ಈ 2025ರ ವರ್ಷ ನಿಮ್ಮೆಲ್ಲರಿಗೆ ಖುಷಿ, ಸಾಮರಸ್ಯೆ ಮತ್ತು ಸಮೃದ್ಧಿಯನ್ನು ತರಲಿ. ಈ ಶುಭ ಸಂದರ್ಭದಲ್ಲಿ ಭಾರತ ಮತ್ತು ಜಗತ್ತಿನ ಸುಸ್ಥಿರ ಭವಿಷ್ಯಕ್ಕೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ತೋರೋಣ ಎಂದು ಹೇಳಿದ್ದಾರೆ.