ಕರ್ನಾಟಕ

karnataka

ETV Bharat / bharat

74ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಷ್ಟ್ರಪತಿ, ವಿವಿಧ ರಾಜಕೀಯ ಪಕ್ಷಗಳ ನಾಯಕರಿಂದ ಶುಭಾಶಯ - PM Modi Birthday - PM MODI BIRTHDAY

1950ರ ಸೆಪ್ಟಂಬರ್ 17ರಂದು ಗುಜರಾತ್‌ನ ಮೆಹ್ಸಾನದಲ್ಲಿ ನರೇಂದ್ರ ಮೋದಿ ಜನಿಸಿದ್ದರು. ಮೋದಿ ಮೂರು ಅವಧಿಗೆ ಗುಜರಾತ್‌ ರಾಜ್ಯದ ಸಿಎಂ ಆಗಿದ್ದರು. ಇದೀಗ ಸತತ 3ನೇ ಅವಧಿಗೆ ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು 74ನೇ ವಸಂತಕ್ಕೆ ಕಾಲಿಟ್ಟಿರುವ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗು ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಶುಭ ಕೋರಿದ್ದಾರೆ.

President and several Leaders wish PM Modi his 74th birthday
ಪ್ರಧಾನಿ ಮೋದಿ (ಐಎಎನ್​ಎಸ್​​)

By ETV Bharat Karnataka Team

Published : Sep 17, 2024, 10:29 AM IST

Updated : Sep 17, 2024, 11:57 AM IST

ನವದೆಹಲಿ:ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣ 'ಎಕ್ಸ್‌' ಮೂಲಕ ಶುಭ ಕೋರಿದ್ದಾರೆ.

ರಾಷ್ಟ್ರಪತಿ ಮುರ್ಮು ಅವರು 'ಎಕ್ಸ್'​ ಜಾಲತಾಣದಲ್ಲಿ ಶುಭ ಕೋರಿದ್ದು, 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಿಮ್ಮ ವ್ಯಕ್ತಿತ್ವ ಮತ್ತು ಶಕ್ತಿಯ ಬಲದ ಮೇಲೆ ನೀವು ಅದ್ಭುತ ನಾಯಕತ್ವವನ್ನು ನೀಡಿದ್ದೀರಿ. ದೇಶದ ಸಮೃದ್ಧಿ ಮತ್ತು ಘನತೆಯನ್ನು ಹೆಚ್ಚಿಸಿದ್ದೀರಿ. ದೇವರು ನಿಮಗೆ ಸುದೀರ್ಘ ಆಯುರಾರೋಗ್ಯ, ಸಂತೋಷ ನೀಡಲಿ' ಎಂದು ಹಾರೈಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಶುಭ ಕೋರಿ, 'ಮೋದಿ ಜಿ ಅವರು ಹೊಸ ಭಾರತದ ದೃಷ್ಟಿ ಹೊಂದಿದ್ದು, ವಿಜ್ಞಾನ ಮತ್ತು ಪರಂಪರೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಅವರಲ್ಲಿರುವ ಸಮರ್ಪಣಾ ಭಾವ ಅಸಾಧ್ಯವೂ ಸಾಧ್ಯವಾಗಿಸಿದೆ. ಬಡವ ಕಲ್ಯಾಣದ ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ನಿತಿನ್​ ಗಡ್ಕರಿ ಶುಭಾಶಯ ತಿಳಿಸಿ, 'ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ ಮತ್ತು ದೀರ್ಘಾಯುಷ್ಯವಿರಲಿ' ಹೊಂದಿ ಎಂದು ತಿಳಿಸಿದ್ದಾರೆ. 'ನಿಮ್ಮ ನಾಯಕತ್ವದಲ್ಲಿ ದೇಶದಿಂದ ಭಯ, ಹಸಿವು, ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗಲಿ. ನಮ್ಮ ಭಾರತ ವಿಶ್ವನಾಯಕನ ಸ್ಥಾನವನ್ನು ಮರಳಿ ಪಡೆಯಲಿ' ಎಂದು ಆಶಿಸಿದ್ದಾರೆ.

ಕಾಂಗ್ರೆಸ್​​ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಹುಟ್ಟು ಹಬ್ಬದಂದು ಒಡಿಶಾದಲ್ಲಿ ಹಲವು ಕಾರ್ಯದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ಒಡಿಶಾ ಮುಖ್ಯಮಂತ್ರಿ ಮೋಹನ್​ ಚರಣ್​ ಮಂಜಿ ಶು ಕೋರಿ, ಒಡಿಶಾದ ಜನರೊಂದಿಗೆ ನಾನು ನಿಮಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದೇನೆ. ನಿಮ್ಮ ಅಪ್ರತಿಮ ನಾಯಕತ್ವದಲ್ಲಿ ದೇಶ ಬೆಳವಣಿಗೆಯ ದಾರಿಯಲ್ಲಿ ಸಾಗುತ್ತಿದೆ. ದೇಶ ಸೇವೆ ಮಾಡಲು ನಿಮಗೆ ಆರೋಗ್ಯ ಮತ್ತು ಆಯಸ್ಸು ಸಿಗಲಿ ಎಂದಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್, ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ತ್ರಿಪುರಾ ಸಿಎಂ ಮಾಣಿಕ್​ ಸಾಹ, ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 20 ಸಾವಿರ ಮಂದಿಗೆ ಉದ್ಯೋಗ: ರಾಣಿಪೇಟೆಗೆ ಬರಲಿದೆ ಟಾಟಾದ ಜಾಗ್ವಾರ್, ಲ್ಯಾಂಡ್‌ರೋವರ್ ಕಾರ್ಖಾನೆ!

Last Updated : Sep 17, 2024, 11:57 AM IST

ABOUT THE AUTHOR

...view details