ಕಡಪ (ಆಂಧ್ರಪ್ರದೇಶ): ರಾಜಕೀಯ ನಾಯಕರು ಕರ್ತವ್ಯದ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಇತರೆ ಅಡ್ಡಿ ಉಂಟು ಮಾಡಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
ದಲಿತ ಸರ್ಕಾರಿ ಅಧಿಕಾರಿ ವಿರುದ್ಧ ಸ್ಥಳೀಯ ವೈಎಸ್‌ಆರ್‌ಸಿಪಿ ನಾಯಕ ಸಿ ಸುದರ್ಶನ್ ರೆಡ್ಡಿ ದಾಳಿ ನಡೆಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈ ರೀತಿಯ ಎಚ್ಚರಿಕೆ ನೀಡಲಾಗಿದೆ. ರಾಜಕೀಯ ನಾಯಕರು ನೀವೇನಾದರೂ ಆಕ್ರೋಶದಿಂದ ಅಧಿಕಾರಿಗಳ ಮೇಲೆ ದರ್ಪ ತೋರಿಸಿದರೆ, ಕಠಿಣ ಶಿಕ್ಷೆಯನ್ನು ಪಡೆಯುತ್ತೀರ ಎಂದು ಪವನ್ ಕಲ್ಯಾಣ್ ಕಡಪ ರಿಮ್ಸ್ ಆಸ್ಪತ್ರೆಯ ಹೊರಗೆ ಮಾತನಾಡಿ ಈ ಎಚ್ಚರಿಕೆ ರವಾನಿಸಿದರು.
ಸುದರ್ಶನ್ ರೆಡ್ಡಿ ಮತ್ತು ಅವರ ಜೊತೆ ಅನೇಕ ನಾಯಕರು ಗಾಲಿವೇಡಿ ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ ಜವಾಹರ್ ಬಾಬು ಮೇಲೆ ದಾಳಿ ನಡೆಸಿದ್ದರು. ಕಚೇರಿ ಕೊಠಡಿಯ ಕೀ ನೀಡಲು ಹಿಂದೇಟು ಹಾಕಿದ್ದರು. ಇದರ ಜೊತೆಗೆ ಬಾಬು ಅವರನ್ನು ರೂಮ್ನಲ್ಲಿ ಕೂಡಿಹಾಕಿದ್ದಲ್ಲದೆ ಅವರನ್ನು ತಳ್ಳಿದ್ದರು. ಜಾತಿ ನಿಂದನೆ ಮಾಡಲಾಗಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿಸಿಎಂ ಆರೋಪಿಸಿದರು.