ವಡೋದರ(ಗುಜರಾತ್):ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ನ ವಡೋದರದಲ್ಲಿ ಸಿ-295 ಏರ್ಕ್ರಾಫ್ಟ್ ತಯಾರಿಸುವ ಟಾಟಾ ಏರ್‌ಬಸ್ ಕಾರ್ಖಾನೆಯನ್ನು ಉದ್ಘಾಟಿಸಿದರು. C295 ಮಿಲಿಟರಿ ವಿಮಾನವಾಗಿದ್ದು, ಅದರ ಉತ್ಪಾದನೆಯು ಭಾರತದ ಏರೋಸ್ಪೇಸ್ ಉದ್ಯಮವನ್ನು ಬಲಪಡಿಸುತ್ತದೆ. ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಹೇಳಲಾಗಿದೆ.
ಇದು ಮಿಲಿಟರಿ ಏರ್ಕ್ರಾಫ್ಟ್ಗಳನ್ನು ಉತ್ಪಾದಿಸುವ ದೇಶದ ಮೊದಲ ಖಾಸಗಿ ವಲಯದ ಕಾರ್ಖಾನೆಯಾಗಿದೆ. ಇದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಜೊತೆಗೆ, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ವರದಿಯಾಗಿದೆ.
ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುವುದು ಮಾತ್ರವಲ್ಲದೇ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್ ಮಿಶನ್ಗೆ ವೇಗ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಿ-295 ಏರ್‌ಬಸ್ ಕಾರ್ಖಾನೆಯು ನವಭಾರತದ ಹೊಸ ರೀತಿಯ ಕೆಲಸದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. 2022ರಲ್ಲಿ ಕಾರ್ಖಾನೆಗೆ ಅಡಿಗಲ್ಲು ಹಾಕಿ, ಎರಡೇ ವರ್ಷದಲ್ಲಿ ಕಾರ್ಯಾರಂಭ ಮಾಡಿದೆ. ಇದು ಯೋಜನೆಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.