ಶ್ರೀನಗರ:25ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ಲಡಾಖ್ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 25 ವರ್ಷಗಳಾಗಿದ್ದು, ಈ ಬಾರಿ ರಜತ ಜಯಂತಿ (ಬೆಳ್ಳಿ ಮಹೋತ್ಸವ)ಮಹೋತ್ಸವವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜು 24ರಿಂದ 26ರ ವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆ ಆಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಲಡಾಖ್ ಪ್ರಾಂತ್ಯಕ್ಕೆ ಆಗಮಿಸುವ ಕುರಿತು ಮಾಹಿತಿ ನೀಡಿರುವ ಹಿರಿಯ ಸೇನಾ ಅಧಿಕಾರಿ, ಜುಲೈ 26ರಂದು ಪ್ರಧಾನಿ ಬೆಳಗ್ಗೆ ಡ್ರಾಸ್ ಬ್ರಿಗೇಡ್ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಸೇನಾ ಅಧಿಕಾರಿಗಳು ಅವರನ್ನು ಸ್ವಾಗತಿಸಲಿದ್ದು, ಅವರು ಕಾರ್ಗಿಲ್ ವಾರ್ ಮೆಮೋರಿಯಲ್ಗೂ ಮುನ್ನ ಕೊಂಚ ವಿಶ್ರಾಂತಿ ಪಡೆಯಲಿದ್ದಾರೆ ಎಂದರು.
ಈ ಭೇಟಿ ವೇಳೆ ಅವರು, ವೀರ ಯೋಧರಿಗೆ ಪುಷ್ಪಾರ್ಚನೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, 'ಶಾಹೀದ್ ಮಾರ್ಗ್'ಗೆ ಭೇಟಿ ನೀಡಲಿದ್ದಾರೆ. ಕಾರ್ಗಿಲ್ ಯುದ್ಧ ಕುರಿತು ಮಾಹಿತಿ ಪಡೆಯಲಿದ್ದಾರೆ. ಬಳಿಕ ಗ್ರೂಪ್ ಫೋಟೋಗ್ರಾಫ್ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು 'ವೀರ್ ನಾರಿ' (ಯುದ್ಧದಲ್ಲಿ ಮಡಿದ ಯೋಧರ ವಿಧವಾ ಪತ್ನಿಯರು) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 'ವೀರ್ ಭೂಮಿ'ಗೆ ಭೇಟಿ ನೀಡಲಿದ್ದಾರೆ. ಜೊತೆಗೆ 'ಶಿನ್ಕುಲ್ ಲಾ ಟನಲ್' ಅನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ.