ಹೈದರಾಬಾದ್: ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಸೆಪ್ಟೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆಯಿದೆ. ಅಮೆರಿಕ ಬಿಡುಗಡೆ ಮಾಡಿದ ಸ್ಪೀಕರ್‌ಗಳ ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ ಹೆಸರನ್ನು ಸೇರಿಸಲಾಗಿದೆ. ಸೆಪ್ಟೆಂಬರ್ 24ರಿಂದ 30ರವರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇನದ ಉನ್ನತ ಮಟ್ಟದ ಸಭೆ ನಡೆಯಲಿದೆ.
ಈ ಪಟ್ಟಿ ಭಾರತ ಸರ್ಕಾರದ ಮುಖ್ಯಸ್ಥರು ಸೆಪ್ಟೆಂಬರ್ 26ರಂದು ಮಧ್ಯಾಹ್ನ ಉನ್ನತಮಟ್ಟದ ಅಧಿವೇಶನ ಉದ್ಧೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ. ಈ ಪಟ್ಟಿ ಅಂತಿಮವಲ್ಲ. ವಿಶ್ವಸಂಸ್ಥೆ ಈ ತಾತ್ಕಾಲಿಕ ಪಟ್ಟಿಯನ್ನು ನಾಯಕರ, ರಾಯಭಾರಿಗಳ ಹಾಜರಾತಿಗೆ ಅನುಗುಣವಾಗಿ ಸಭೆ ನಡೆಯುವ ವಾರದ ಮುಂದೆ ನವೀಕರಿಸಲಿದೆ.
ಈ ಸಭೆಯಲ್ಲಿ ಸಾಂಪ್ರದಾಯಿಕವಾಗಿ ಬ್ರೆಜಿಲ್ ಮೊದಲ ಭಾಷಣ ಮಾಡಲಿದೆ. ಅವರ ಬಳಿಕ ಅಮೆರಿಕದ ಅಧ್ಯಕ್ಷ ಬೈಡನ್ ಮಾತನಾಡಲಿದ್ದಾರೆ. ಈ ಉನ್ನತ ಮಟ್ಟದ ಸಮಾವೇಶ ಸೆಪ್ಟೆಂಬರ್ 24 ರಿಂದ ಪ್ರಾರಂಭವಾಗಲಿದೆ.
ಮೂರನೇ ಅವಧಿಗೆ ಮತ್ತೊಮ್ಮೆ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು, ಈ ಹಿಂದೆ 2021ರ ಸೆಪ್ಟೆಂಬರ್ನಲ್ಲಿ ನಡೆದ ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದರು. ಕಳೆದ ವರ್ಷ ಜೂನ್ 21ರಂದು ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಗಿರುವ ಆಂಟೋನಿಯೊ ಗುಟೆರೆಸ್ ಆರಂಭಿಕ ವರದಿ ಮಂಡಿಸಿ, ಭಾಷಣ ಮಾಡುತ್ತಾರೆ. ವಿಶ್ವ ಸಂಸ್ಥೆ ಮುಖ್ಯ ಕಚೇರಿಯಲ್ಲಿ ಉನ್ನತಮಟ್ಟದ ವಾರದಲ್ಲಿ ಸೆಪ್ಟೆಂಬರ್ 22 - 23ರವರೆಗೆ ಶೃಂಗಸಭೆಯನ್ನು ನಿಗದಿಪಡಿಸಲಾಗಿದೆ. ಉನ್ನತ ಮಟ್ಟದ ವಾರದಲ್ಲಿ, ವಿಶ್ವ ನಾಯಕರು ಸುಸ್ಥಿರ ಅಭಿವೃದ್ಧಿ ಗುರಿಗಳ ಶೃಂಗಸಭೆ, ಹವಾಮಾನ ಮಹತ್ವಾಕಾಂಕ್ಷೆಗಳ ಶೃಂಗಸಭೆ ಮತ್ತು ಸಾಮಾನ್ಯ ಚರ್ಚೆ ಇತರ ಪ್ರಮುಖ ಸಭೆಯನ್ನು ನಡೆಸಲಿದ್ದಾರೆ. (ಪಿಟಿಐ)
ಇದನ್ನೂ ಓದಿ: :ಟ್ರಂಪ್ ಮೇಲಿನ ದಾಳಿಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಖಂಡನೆ