ನವದೆಹಲಿ: ಅಜ್ಮೀರ್ ದರ್ಗಾದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಚಾದರ್ ಅನ್ನು ಅಜ್ಮೀರದ ಶರೀಫ್ ದರ್ಗಾಕ್ಕೆ ಸಮರ್ಪಿಸಲಿದ್ದಾರೆ.
ಅಜ್ಮೀರದ ಪ್ರಸಿದ್ಧ ಸೂಫಿ ಸಂತನಿಗೆ ಪ್ರಧಾನಿ ಮೋದಿ ಪ್ರತೀ ವರ್ಷ ಚಾದರ್ ಸಮರ್ಪಿಸುತ್ತಿದ್ದಾರೆ.
"ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಶುಭಾಶಯಗಳು. ಈ ವಿಶೇಷ ಸಂದರ್ಭ ಪ್ರತಿಯೊಬ್ಬರ ಬಾಳಿನಲ್ಲಿ ಸಂತೋಷ ಮತ್ತು ನೆಮ್ಮದಿ ತರಲಿ" ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಾದರ್ ಅನ್ನು ಸಚಿವ ರಿಜಿಜು ಅವರಿಗೆ ನೀಡುತ್ತಿರುವ ಫೋಟೊವನ್ನು ಸಚಿವರು ತಮ್ಮ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.