ಪಾಟ್ನಾ, ಬಿಹಾರ: ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಎಸ್‌ಸಿ, ಎಸ್‌ಟಿ, ಇಬಿಸಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ 65ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಕಾನೂನನ್ನು ಪಾಟ್ನಾ ಹೈಕೋರ್ಟ್ ರದ್ದು ಮಾಡಿದೆ.
ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣದಲ್ಲಿ ಹಿಂದುಳಿದ, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೋಟಾವನ್ನು ಶೇಕಡಾ 50 ರಿಂದ 65 ಕ್ಕೆ ಹೆಚ್ಚಿಸುವ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕಳೆದ ಮಾರ್ಚ್ನಲ್ಲೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಗೌರವ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ 10 ರಿಟ್ ಅರ್ಜಿಗಳ ಮ್ಯಾರಥಾನ್ ವಿಚಾರಣೆಯನ್ನು ಮುಕ್ತಾಯಗೊಳಿಸಿದ ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಹರೀಶ್ ಕುಮಾರ್ ಅವರ ವಿಭಾಗೀಯ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಮೀಸಲಾತಿ ಕಾನೂನುಗಳಲ್ಲಿ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಕಳೆದ ವರ್ಷದ ನವೆಂಬರ್ 21 ರಂದು, ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿದ ಮೀಸಲಾತಿ ಕಾನೂನುಗಳನ್ನು ಅಧಿಸೂಚನೆ ಹೊರಡಿಸಿತ್ತು.
ಹಿಂದುಳಿದ ವರ್ಗಗಳಿಗೆ ಶೇ.65 ಮೀಸಲಾತಿ: ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪಿ.ಕೆ.ಶಾಹಿ ವಾದ ಮಂಡಿಸಿದರು. ಈ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲದ ಕಾರಣ ರಾಜ್ಯ ಸರ್ಕಾರ ಈ ಮೀಸಲಾತಿ ನೀಡಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯ ಸರಕಾರ ಈ ಮೀಸಲಾತಿಯನ್ನು ಪ್ರಮಾಣಾನುಗುಣವಾಗಿ ನೀಡಿಲ್ಲ ಎಂದು ತಮ್ಮ ವಾದ ಮಂಡನೆ ಮಾಡಿದ್ದರು. ರಾಜ್ಯ ಸರ್ಕಾರವು ನವೆಂಬರ್ 9, 2023 ರಂದು ಜಾರಿಗೆ ತಂದ ಕಾನೂನನ್ನು ಇದೇ ವೇಳೆ ಅವರು ಪ್ರಶ್ನಿಸಿದ್ದರು. ಇದರಲ್ಲಿ ಎಸ್‌ಸಿ, ಎಸ್‌ಟಿ, ಇಬಿಸಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ.65ರಷ್ಟು ಮೀಸಲಾತಿ ನೀಡಲಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆಯಲ್ಲಿ ಶೇ.35ರಷ್ಟು ಹುದ್ದೆಗಳನ್ನು ಮಾತ್ರ ನೀಡಲಾಗಿದೆ ಎಂಬ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
ಜಾತಿಗಳ ಅನುಪಾತದ ಆಧಾರದ ಮೇಲೆ ಮೀಸಲಾತಿ:ಸಾಮಾನ್ಯ ವರ್ಗದಲ್ಲಿ ಇಡಬ್ಲ್ಯೂಎಸ್‌ಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವುದು ಭಾರತೀಯ ಸಂವಿಧಾನದ ಸೆಕ್ಷನ್ 14 ಮತ್ತು ಸೆಕ್ಷನ್ 15 (6) (ಬಿ) ಗೆ ವಿರುದ್ಧವಾಗಿದೆ ಎಂದು ವಕೀಲ ದಿನು ಕುಮಾರ್ ಹಿಂದಿನ ವಿಚಾರಣೆಗಳಲ್ಲಿ ವಾದ ಮಂಡಿಸಿದ್ದರು. ಜಾತಿ ಸಮೀಕ್ಷೆಯ ನಂತರ ಮೀಸಲಾತಿ ನಿರ್ಧಾರವನ್ನು ಜಾತಿಗಳ ಅನುಪಾತದ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆಯೇ ಹೊರತು ಸರ್ಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಪ್ರಾತಿನಿಧ್ಯದ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದ್ದರು.
ಶೇ.50ರಿಂದ ಶೇ.65ಕ್ಕೆ ಏರಿಕೆ: ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಶೇ.50ಕ್ಕೆ ನಿರ್ಬಂಧಿಸಿತ್ತು. ಈ ವಿಚಾರದ ಆಧಾರದ ಮೇಲೆ ದಿನುಕುಮಾರ್ ತಮ್ಮ ವಾದ ಮಂಡನೆ ಮಾಡಿದ್ದರು. ಜಾತಿ ಸಮೀಕ್ಷೆ ವಿಷಯ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದರ ಆಧಾರದ ಮೇಲೆ, ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇನ್ನು ಈ ಕಾನೂನಿನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮಿತಿಯನ್ನು ಶೇ 50 ರಿಂದ ಶೇ 65ಕ್ಕೆ ಹೆಚ್ಚಿಸಿತ್ತು. ೠ
ಇದನ್ನು ಓದಿ:ನಕಲಿ ಮದ್ಯ ಸೇವಿಸಿ 35 ಮಂದಿ ದುರ್ಮರಣ : 20 ಜನರ ಸ್ಥಿತಿ ಚಿಂತಾಜನಕ - fake liquor consuming case