ಮುಂಬೈ:ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರ ನಿಧನಕ್ಕೆಕೊಳಲು ವಾದಕ ಪಂಡಿತ್ ರೋನು ಮಜುಮ್ದಾರ್ ಅವರು ಸಂತಾಪ ಸೂಚಿಸಿದ್ದಾರೆ.
ಈಟಿವಿ ಭಾರತ್ಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾತನಾಡಿದ ಮಜುಂದಾರ್ ಅವರು, "ಜಾಕಿರ್ ಹುಸೇನ್ ಅವರ ನಿಧನ ಸಂಗೀತ ಲೋಕವನ್ನು ದಿಗ್ಭ್ರಮೆಗೊಳಿಸಿದೆ. ನನಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ತುಂಬಾ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಸಂಗೀತ ಲೋಕದ ಉಜ್ವಲ ತಾರೆ ಮರೆಯಾಯಿತು. ನಾನು, ಜಾಕಿರ್ ಬಾಯ್ ಮತ್ತು ಅವರ ಕುಟುಂಬದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇನೆ. ಅವರ ಕಿರಿಯ ಸಹೋದರ ತೌಫಿಕ್ ಬಾಲ್ಯದಿಂದಲೂ ನನ್ನ ಸ್ನೇಹಿತ. ನಾನು ಎರಡು ಸೂಪರ್ಹಿಟ್ ಆಲ್ಬಂಗಳು ಮತ್ತು ಹಲವಾರು ಚಲನಚಿತ್ರಗಳಲ್ಲಿ ಜಾಕಿರ್ ಜೊತೆ ಕೆಲಸ ಮಾಡಿದ್ದೇನೆ" ಎಂದು ಪಂಡಿತ್ ಮಜುಂದಾರ್ ಮೆಲುಕು ಹಾಕಿದರು. ('ಹಾರ್ಟ್ ಟು ಹಾರ್ಟ್' ಮತ್ತು 'ಎಥೆರಿಯಲ್ ರಿದಮ್ಸ್ ಜನಪ್ರಿಯ ಆಲ್ಬಂಗಳು).
"1996 ರಲ್ಲಿ ನಾನು ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ಅಂದು ನನ್ನೊಂದಿಗೆ ಇದ್ದ ರೀತಿ, ಇದಕ್ಕೂ ಮೊದಲೇ ನಾವು ಅಂದರೆ ದೀರ್ಘಕಾಲದಿಂದ ಹೀಗೆ ಇದ್ದೆವು ಎಂದು ಅನಿಸುತ್ತಿತ್ತು. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ಅವರು ಜೀವನಕ್ಕಿಂತ ದೊಡ್ಡವರು, ನಾವು ಗ್ರಹಿಸಲು ಸಾಧ್ಯವಾಗುವುದಕ್ಕಿಂತ ದೊಡ್ಡ ವ್ಯಕ್ತಿತ್ವ" ಎಂದು ರೋನು ಮಜುಮ್ದಾರ್ ಜಾಕಿರ್ ಅವರೊಂದಿಗೆ ಕಳೆದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಾಕಿರ್:ಸೋಮವಾರ ಮುಂಜಾನೆ ಹುಸೇನ್ ಅವರ ಕುಟುಂಬವು ಅವರ ನಿಧನವನ್ನು ದೃಢಪಡಿಸಿತು. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ನಿಂದ ಜಾಕಿರ್ ಅವರು ತಮ್ಮ 73ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು.