ನವದೆಹಲಿ:18ನೇ ಲೋಕಸಭಾ ಚುನಾವಣೆಗೆ ಏಳನೇ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. ಚುನಾವಣೆ ಮುಗಿಯುವ ಮುನ್ನವೇ ಬೆಟ್ಟಿಂಗ್ ಬಜಾರ್ನಲ್ಲಿ (ಸಟ್ಟಾ ಬಜಾರ್) ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?, ಎಷ್ಟು ಸ್ಥಾನ ಪಡೆಯಲಿದೆ ಎಂಬ ಚರ್ಚೆ ಜೋರಾಗಿದೆ. ಈ ಹಿಂದೆ ಫಲಿತಾಂಶಕ್ಕೆ ತೀರಾ ಹತ್ತಿರದ ಸೀಟುಗಳನ್ನು ಅಂದಾಜಿಸಿದ್ದ ರಾಜಸ್ಥಾನದ ಪಲೋಡಿ ಸಟ್ಟಾ ಬಜಾರ್ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ, ಉತ್ತರಪ್ರದೇಶದಲ್ಲಿ ಹಿಂದಿಗಿಂತಲೂ ಹೆಚ್ಚು ಸೀಟು ಖೋತಾ ಆಗಲಿದೆ ಎಂದಿದೆ.
ಈ ಹಿಂದೆ ಪಲೋಡಿ ಸಟ್ಟಾ ಬಜಾರ್ (ಬೆಟ್ಟಿಂಗ್ ಮಾರುಕಟ್ಟೆ) ರಾಜಕೀಯ ಪಕ್ಷಗಳ ಸ್ಥಾನಗಳನ್ನು ಅಂದಾಜಿಸಿ ಭವಿಷ್ಯ ನುಡಿದಿತ್ತು. ಏಳನೇ ಹಂತದ ಮತದಾನಕ್ಕೂ ಮುನ್ನ ಹೊಸ ಭವಿಷ್ಯ ನುಡಿದಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಫಲೋಡಿ ಸಟ್ಟಾ ಬಜಾರ್‌ನ ಮೊದಲಿನ ಅಂದಾಜಿನ ಪ್ರಕಾರ, ಬಿಜೆಪಿಯು ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದಿತ್ತು. ಆದರೆ, ಹೊಸ ಅಂದಾಜಿನಲ್ಲಿ ಸಮೀಕರಣಗಳು ಬದಲಾಗಿವೆ. ಈಗಿನ ಅಂದಾಜಿನ ಪ್ರಕಾರ, I.N.D.I ಕೂಟದ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳು ಮೊದಲಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 2019 ರ ಫಲಿತಾಂಶಕ್ಕಿಂತ ಕಡಿಮೆ ಸೀಟುಗಳನ್ನು ಪಡೆಯಲಿದೆ ಎಂದಿದೆ
ಅಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಾನಗಳು ಇಳಿಕೆಯಾಗಲಿದ್ದು, ಈ ಬಾರಿ 55 ರಿಂದ 65 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ರಾಜ್ಯದಲ್ಲಿ ಬಲಗೊಳ್ಳಲಿದ್ದು, ಎರಡೂ ಸೇರಿ 15 ರಿಂದ 25 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.
ಪಲೋಡಿಯ ಮೊದಲ ಅಂದಾಜು (ದೇಶದಲ್ಲಿ)
- ಬಿಜೆಪಿ+ 304-306
- ಕಾಂಗ್ರೆಸ್+ 50