ಕರ್ನಾಟಕ

karnataka

ETV Bharat / bharat

ಪೂಂಚ್: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಒಳ ನುಸುಳುಕೋರನ ಬಂಧನ

ಭಾರತದ ಗಡಿಯ ಒಳಗೆ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನಿ ಪ್ರಜೆಯನ್ನು ಭಾರತೀಯ ಸೇನೆ ಬಂಧಿಸಿದೆ. ಬಂಧನದ ವೇಳೆ ಆತನ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಕಂಡು ಬಂದಿಲ್ಲ. ಆದರೆ, ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PAKISTANI INTRUDER ARRESTED
ಭಾರತೀಯ ಸೇನೆ (File)

By ETV Bharat Karnataka Team

Published : 5 hours ago

ಪೂಂಚ್, ಜಮ್ಮು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬುಧವಾರ ತಡರಾತ್ರಿ ಭಾರತೀಯ ಸೇನೆಯು 18 ವರ್ಷದ ಪಾಕಿಸ್ತಾನಿ ಒಳನುಸುಳುಕೋರನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಾದಿಕ್ ಬಂಧಿತ ಪಾಕ್ ಪ್ರಜೆ ಎಂದು ತಿಳಿದು ಬಂದಿದೆ. ಗಡಿ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಾಚರಣೆ ವೇಳೆ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಗ್ಗಲು ಯತ್ನಿಸುತ್ತಿದ್ದ ಸಾದಿಕ್ ಎಂಬಾತನನ್ನು ಬಂಧಿಸಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸಾದಿಕ್ ತಡರಾತ್ರಿ ಪಾಕ್​ ಗಡಿಯಾಚೆಯಿಂದ ಭಾರತದ ಗಡಿಯೊಳಗೆ ಜಾಗರೂಕತೆಯಿಂದ ನುಸುಳಲು ಪ್ರಯತ್ನಿಸಿದಾಗ ಸೇನಾಪಡೆಗಳು ಗುರುತಿಸಿ ತಡೆದು ಬಂಧಿಸಿವೆ. ಬಂಧನದ ಬಳಿಕ ಆತನ ಬಗ್ಗೆ ಅನುಮಾನ ಮೂಡಿದ್ದರಿಂದ ಭಾರತೀಯ ಸೇನೆಯು ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ತಾನು ಪಾಕಿಸ್ತಾನಿ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಬಂಧನದ ವೇಳೆ ಆತನ ಬಳಿ ಯಾವುದೇ ಆಯುಧವಾಗಲಿ ಅಥವಾ ಶಸ್ತ್ರಾಸ್ತ್ರಗಳಾಗಲಿ ಕಂಡು ಬಂದಿಲ್ಲ. ಉದ್ದೇಶಪೂರ್ವಕವಾಗಿ ಗಡಿ ದಾಟಿರಬಹುದೋ ಅಥವಾ ಆಕಸ್ಮಿಕವಾಗಿ ದಾಟಿದ್ದಾನೋ ಎಂಬ ಬಗ್ಗೆ ತಿಳಿದು ಬಂದಿಲ್ಲ. ಸದ್ಯ ಆತನ ವಿಚಾರಣೆ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ಗಡಿಯಲ್ಲಿ ಒಳನುಸುಳುವಿಕೆ ಪ್ರಕರಣ ಮತ್ತು ಕದನ ವಿರಾಮ ಉಲ್ಲಂಘನೆಗಳಂತಹ ಘಟನೆಗಳು ಹೆಚ್ಚಾಗಿದ್ದರಿಂದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಕ್ಸಲೀಯರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ: ವಾರದಲ್ಲಿ 5ನೇ ಘಟನೆ

ABOUT THE AUTHOR

...view details