ಜಮ್ಮು:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಟವರ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದರ ಹಿಂದೆ ಒಳನುಸುಳುವಿಕೆ ಚಟುವಟಿಕೆಗಳಲ್ಲಿ ಭಯೋತ್ಪಾದಕರು ಮತ್ತು ಸಹಚರರಿಗೆ ಸಹಾಯ ಮಾಡುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತ ಸಂವಹನ ಉದ್ದೇಶಗಳಿಗಾಗಿ ಭಯೋತ್ಪಾದಕ ಗುಂಪುಗಳು ಸ್ಮಾರ್ಟ್‌ಫೋನ್‌ಗಳು ಮತ್ತು ರೇಡಿಯೊ ಸೆಟ್‌ಗಳನ್ನು ವಿಲೀನಗೊಳಿಸುವ ಹೆಚ್ಚು ಗೂಢಲಿಪೀಕರಿಸಲಾದ ವೈಎಸ್‌ಎಂಎಸ್ ತಂತ್ರಜ್ಞಾನದ ಸೇವೆಗಳನ್ನು ಬಳಸುತ್ತಿವೆ. ಇತ್ತೀಚಿನ ಭಯೋತ್ಪಾದಕ ದಾಳಿಗಳು, ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ವ್ಯಾಪ್ತಿಯ ಪಿರ್ ಪಂಜಾಲ್‌ನ ದಾಳಿಯ ಮಾದರಿಯನ್ನು ಅಧ್ಯಯನ ಮಾಡಿದ ನಂತರ ಈ ಮಾಹಿತಿ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಒಸಿಯಾದ್ಯಂತ ಈ ಟೆಲಿಕಾಂ ನೆಟ್‌ವರ್ಕ್ ಬಳಸಲಾಗುತ್ತದೆ. ಈ ತಂತ್ರಜ್ಞಾನದೊಂದಿಗೆ ಪಿಒಕೆಯಲ್ಲಿನ ಭಯೋತ್ಪಾದನೆಯ ಹ್ಯಾಂಡ್ಲರ್‌ಗಳು ಒಳನುಸುಳುವ ಗುಂಪು ಮತ್ತು ಜಮ್ಮು ಪ್ರದೇಶದಲ್ಲಿ ಈ ಗುಂಪನ್ನು ಬರಮಾಡಿಕೊಳ್ಳುವ ಗುಂಪಿನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಪಾಕಿಸ್ತಾನದ ಗಡಿಯನ್ನು ಕಾವಲು ಕಾಯುತ್ತಿರುವ ಸೇನೆ ಅಥವಾ ಬಿಎಸ್‌ಎಫ್‌ನಿಂದ ತಪ್ಪಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಟೆಲಿಕಾಂ ಸಿಗ್ನಲ್‌ಗಳನ್ನು ಹೆಚ್ಚಿಸುವ ಯೋಜನೆಯನ್ನು ಸಂಪೂರ್ಣವಾಗಿ ಪಾಕಿಸ್ತಾನದ ಸೇನಾ ಅಧಿಕಾರಿ ಮೇಜರ್ ಜನರಲ್ ಉಮರ್ ಅಹ್ಮದ್ ಷಾ ನೇತೃತ್ವದ ವಿಶೇಷ ಸಂವಹನ ಸಂಸ್ಥೆಗೆ ವಹಿಸಲಾಗಿದೆ. ಉಮರ್ ಅಹ್ಮದ್ ಷಾ ಈ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐಯೊಂದಿಗೆ ಕೆಲಸ ಮಾಡುತ್ತಿದ್ದ ಎಂದೇ ಹೇಳಲಾಗಿದೆ.
ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಟೆಲಿಕಾಂ ಟವರ್‌ಗಳನ್ನು ಸಾಮಾನ್ಯವಾಗಿ ಒಳನುಸುಳುವಿಕೆ ಚಟುವಟಿಕೆಗಳಲ್ಲಿ ಭಯೋತ್ಪಾದಕರು ಮತ್ತು ಸಹಚರರಿಗೆ ಸಹಾಯ ಮಾಡಲು ಬಳಸಲಾಗುವ ಕಾರ್ಯತಂತ್ರದ ನಿಯೋಜನೆಯು ವಿಶ್ವಸಂಸ್ಥೆಯ ಅಡಿಯಲ್ಲಿನ ಸಂಸ್ಥೆಯಾದ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ಐಟಿಯು) ಸಂವಿಧಾನದ 45ನೇ ವಿಧಿಯ ಉಲ್ಲಂಘನೆಯಾಗಿದೆ.
ಐಟಿಯು ಸಂವಿಧಾನದ 45ನೇ ವಿಧಿಯು ಎಲ್ಲ 193 ಸದಸ್ಯ ರಾಷ್ಟ್ರಗಳು ಗುರುತಿಸಿದ ಸಿಗ್ನಲ್ಗಳ ಪ್ರಸರಣವನ್ನು ತಡೆಗಟ್ಟಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತಹ ಸಿಗ್ನಲ್‌ಗಳನ್ನು ರವಾನಿಸುವ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಕೇಂದ್ರಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸುವಲ್ಲಿ ಸಹಕರಿಸಬೇಕು ಎಂದು ಹೇಳುತ್ತದೆ.
ಐಟಿಯು ಅಡಿಯಲ್ಲಿ ರೇಡಿಯೊ ಕಮ್ಯುನಿಕೇಷನ್ ಬ್ಯೂರೋ ಎಲ್ಲ ಕೇಂದ್ರಗಳು ಅನಗತ್ಯ ಪ್ರಸರಣಗಳನ್ನು ನಿರ್ಬಂಧಿಸಲಾಗಿದೆ ಅಥವಾ ಅತಿಯಾದ ಸಿಗ್ನಲ್ಗಳ ಪ್ರಸರಣ ಅಥವಾ ತಪ್ಪು ಅಥವಾ ದಾರಿತಪ್ಪಿಸುವ ಸಿಗ್ನಲ್ಗಳ ಪ್ರಸರಣ ಅಥವಾ ಗುರುತಿಲ್ಲದ ಸಿಗ್ನಲ್ಗಳ ಪ್ರಸರಣ ನಿಷೇಧಿಸಲಾಗಿದೆ. ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲು ಸಚಿವರ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ಟೆಲಿಕಾಂ ಟವರ್‌ಗಳು ಕೋಡ್ ಡಿವಿಷನ್ ಮಲ್ಟಿಪಲ್ ಆಕ್ಸೆಸ್ (ಸಿಡಿಎಂಎ) ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ವೈಎಸ್‌ಎಂಎಸ್ ಕಾರ್ಯಾಚರಣೆಗಳನ್ನು ಪೂರೈಸಲು ಚೀನಾದ ಸಂಸ್ಥೆಯಿಂದ ಎನ್‌ಕ್ರಿಪ್ಶನ್ ಮಾಡಲಾಗಿದೆ. ಈ ಟೆಲಿಕಾಂ ಮೂಲಸೌಕರ್ಯವು ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಒಳನುಸುಳುವ ಭಯೋತ್ಪಾದಕರ ಸಂಪರ್ಕಗಳನ್ನು ಬೆಂಬಲಿಸುತ್ತದೆ. ನಿಯಂತ್ರಣ ರೇಖೆಯ ಉದ್ದಕ್ಕೂ ಸಿಡಿಎಂಎ ತಂತ್ರಜ್ಞಾನವನ್ನು ಮೇಲ್ವಿಚಾರಣೆಯ ಪ್ರಯತ್ನಗಳನ್ನು ಸಂಕೀರ್ಣಗೊಳಿಸುವ ಗುರಿಯೊಂದಿಗೆ ಮಾಡಲಾಗಿದೆ. ಈ ತಂತ್ರಜ್ಞಾನವು ಒಂದೇ ಪ್ರಸರಣ ಚಾನಲ್‌ನಲ್ಲಿ ಅನೇಕ ಸಿಗ್ನಲ್‌ಗಳನ್ನು ಅನುಮತಿಸುತ್ತದೆ. ಅಕ್ರಮ ಸಂವಹನಗಳನ್ನು ನಿಯಂತ್ರಿಸುವಲ್ಲಿ ಸವಾಲುಗಳನ್ನು ಒಡ್ಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
2019 ಮತ್ತು 2020ರಲ್ಲೂ ಇಂತಹ ತಂತ್ರಜ್ಞಾನದ ಬಳಕೆಯ ನಿದರ್ಶನ ಇವೆ. ಆಗ ಗೂಢಲಿಪಿಯನ್ನು ಭೇದಿಸುವ ಮೂಲಕ ಭದ್ರತಾ ಏಜೆನ್ಸಿಗಳು ತಡೆಯೊಡ್ಡಿದ್ದವು. ಪಾಕಿಸ್ತಾನದ ಸಹಾಯದಿಂದ ಭಯೋತ್ಪಾದಕ ಗುಂಪುಗಳು ಈ ರೀತಿಯ ಪ್ರಯತ್ನ ಮಾಡುತ್ತಿವೆ. ಭದ್ರತಾ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭದ್ರತಾ ಏಜೆನ್ಸಿಗಳು ಹೊಸ ತಂತ್ರಜ್ಞಾನವನ್ನು ರಾಷ್ಟ್ರವ್ಯಾಪಿ ವಿಶೇಷವಾಗಿ ಜೈಲುಗಳಲ್ಲಿ ಪರೀಕ್ಷಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋರಾ, ವೈಎಸ್‌ಎಂಎಸ್, ಬೈದು ಮತ್ತು ತುರಯಾ ಸ್ಯಾಟಲೈಟ್ ಕಮ್ಯುನಿಕೇಷನ್‌ನಂತಹ ವಿವಿಧ ತಂತ್ರಜ್ಞಾನಗಳು ಭಾರತದಲ್ಲಿರುವ ಭಯೋತ್ಪಾದಕರು ಮತ್ತು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ನಡುವಿನ ಸಂವಹನವು ಸುಗಮಗೊಳಿಸುತ್ತಿರುವುದು ಕಳವಳಕಾರಿಯಾಗಿದೆ. ಲೋರಾ ತಂತ್ರಜ್ಞಾನವನ್ನು ಭಯೋತ್ಪಾದಕ ಗುಂಪುಗಳು ಮತ್ತು ಹ್ಯಾಂಡ್ಲರ್‌ಗಳು ಬಳಸುತ್ತಿದ್ದಾರೆ. ಇದರಿಂದಾಗಿ ಭಯೋತ್ಪಾದಕರು ಮತ್ತು ಭೂಗತವಾಗಿರುವ ಹ್ಯಾಂಡ್ಲರ್‌ಗಳ ನಡುವಿನ ಸಂವಹನವು ಪತ್ತೆಯಾಗುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದ ಜಿಡಿಪಿ ಮೀರಿ ಬೆಳೆಯುತ್ತಿದೆ ಸಾಲದ ಪ್ರಮಾಣ: ಅಧ್ಯಯನ ವರದಿ