ಬಿಜಾಪುರ್(ಛತ್ತೀಸ್ಗಢ): ಇಲ್ಲಿನ ಮುಂಗ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ನಕ್ಸಲ್ ಸಾವನ್ನಪ್ಪಿದ್ದು, ಇದೇ ಕಾರ್ಯಾಚರಣೆ ವೇಳೆ ಐಇಡಿ ಸ್ಪೋಟ ಸಂಭವಿಸಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
"ನಕ್ಸಲ್ ಚಟುವಟಿಕೆಗಳ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಗ ಅರಣ್ಯದಲ್ಲಿ ಇಂದು ಬೆಳಗ್ಗೆ ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ) ತಂಡ ಶೋಧ ಆರಂಭಿಸಿತು. ಈ ವೇಳೆ ನಕ್ಸಲರು ಭದ್ರತಾ ಪಡೆ ವಿರುದ್ಧ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಸಿಬ್ಬಂದಿ ಪ್ರತಿದಾಳಿ ಕೈಗೊಂಡರು. ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತನಾದ. 9ಎಂಎಂಎ ಪಿಸ್ತೂಲ್, ಜೀವಂತ ಐಇಡಿ ಮತ್ತು ಆ6 ರಿಮೋಟ್ ಸ್ವಿಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಐಇಡಿ ಸ್ಪೋಟಿಸಲು ನಕ್ಸಲರು ಈ ರಿಮೋಟ್ ಸ್ವಿಚ್‌ಗಳನ್ನು ಬಳಸುತ್ತಿದ್ದರು. ಕಾರ್ಯಾಚರಣೆ ವೇಳೆ ನಕ್ಸಲರು ಐಇಡಿ ಸ್ಪೋಟಿಸಿದ ಕಾರಣ ಡಿಆರ್ಜಿಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.