ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಚುನಾವಣೆ: ಮಹಾ ವಿಕಾಸ್​ ಅಘಾಡಿ ಮಧ್ಯೆ 85-85-85 ಸೂತ್ರದ ಸೀಟು ಹಂಚಿಕೆ

ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ)ಯ ಮಹಾ ವಿಕಾಸ್​ ಅಘಾಡಿ ಕೂಟದಲ್ಲಿ ಸೀಟು ಹಂಚಿಕೆ ಮಾತುಕತೆ ಮುಗಿದಿವೆ. ಮೂರೂ ಪಕ್ಷಗಳು ತಲಾ 85 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ.

ಮಹಾ ವಿಕಾಸ್​ ಅಘಾಡಿ ಸೀಟು ಹಂಚಿಕೆ
ಮಹಾ ವಿಕಾಸ್​ ಅಘಾಡಿ ಸೀಟು ಹಂಚಿಕೆ (ANI)

By ETV Bharat Karnataka Team

Published : 4 hours ago

Updated : 4 hours ago

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ(ಎಂವಿಎ) ಯಲ್ಲಿ ಸೀಟು ಹಂಚಿಕೆ ನಡೆದಿದೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಮೂರೂ ಪಕ್ಷಗಳು ತಲಾ 85 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ.

ಮಹಾ ವಿಕಾಸ ಅಘಾಡಿ ಕೂಟವು ವಿಧಾನಸಭೆಯ 288 ಸ್ಥಾನಗಳ ಪೈಕಿ 270 ರಲ್ಲಿ ಸ್ಪರ್ಧೆ ಮಾಡಲು ಒಮ್ಮತಕ್ಕೆ ಬಂದಿದೆ. ಉಳಿದ 18 ಸ್ಥಾನಗಳನ್ನು ಸಮಾಜವಾದಿ ಪಕ್ಷ ಸೇರಿದಂತೆ ಇತರ ಮಿತ್ರ ಪಕ್ಷಗಳಿಗೆ ಹಂಚಿಕೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ಕೂಟದ ನಾಯಕರು ತಿಳಿಸಿದ್ದಾರೆ.

ಹಲವು ದಿನಗಳ ಗೊಂದಲ, ವಾಕ್ಸಮರ, ತಿಕ್ಕಾಟದ ನಂತರ ಎಂವಿಎ ಈ ತೀರ್ಮಾನಕ್ಕೆ ಬಂದಿದೆ. ಮೂರು ಪಕ್ಷಗಳು ಸ್ಪರ್ಧಿಸುವ 270 ಸೀಟುಗಳ ಪೈಕಿ 85-85-85 ಸೀಟು ಹಂಚಿಕೆ ಆಗಿವೆ. ಅಂದರೆ, 255 ಸ್ಥಾನಗಳು ಮೂರೂ ಪಕ್ಷಗಳಿಗೆ ಬಂದಿವೆ. ಉಳಿದ 15 ಸ್ಥಾನಗಳ ಕುರಿತು ಮಾತುಕತೆ ನಡೆಯುತ್ತಿದ್ದು, ಗುರುವಾರ ಅಂತಿಮ ನಿರ್ಧಾರವಾಗಲಿದೆ.

ಗುರುವಾರ ಪೂರ್ಣ ಚಿತ್ರ:ಮೈತ್ರಿಕೂಟವು ಸೀಟು ಹಂಚಿಕೆ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಮತ್ತೊಂದೆಡೆ, 12 ಸ್ಥಾನಗಳ ನಿರೀಕ್ಷೆಯಲ್ಲಿರುವ ಸಮಾಜವಾದಿ ಪಕ್ಷವು ಈಗಾಗಲೇ 5 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಸಮಾಜವಾದಿ ಪಕ್ಷ ಮತ್ತು ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಚರ್ಚಿಸಿ, ಗುರುವಾರದೊಳಗೆ ಎಲ್ಲವನ್ನೂ ಪೂರ್ಣಗೊಳಿಸಲಾಗುವುದು ಎಂದು ನಾನಾ ಪಟೋಲೆ ಹೇಳಿದರು.

ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವಾಗಿ ಸ್ಪರ್ಧಿಸುತ್ತಿದ್ದು, ‘ಮಹಾಯುತಿ ಮೈತ್ರಿ’ ವಿರುದ್ಧ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ. ಸೀಟು ಹೊಂದಾಣಿಕೆ ವಿಳಂಬದ ಬಗ್ಗೆ ಸಣ್ಣ ಪಕ್ಷಗಳು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿರುವುದು ಗಮನಾರ್ಹ. ಸಮಾಜವಾದಿ ಪಕ್ಷ, ಎಎಪಿ, ಎಡ ಮತ್ತು ಪಿಡಬ್ಲ್ಯೂಪಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿವೆ.

ಸಿಎಂ ಶಿಂಧೆ ವಿರುದ್ಧ ಯಾರು ಸ್ಪರ್ಧೆ?:ಶಿವಸೇನೆ (ಯುಬಿಟಿ) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 65 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮುಂಬೈನ ವರ್ಲಿಯಿಂದ ಸ್ಪರ್ಧಿಸಲಿದ್ದಾರೆ. ಉದ್ಧವ್ ಠಾಕ್ರೆ ಅವರು ತಮ್ಮ ರಾಜಕೀಯ ಗುರು ಆನಂದ್ ದಿಘೆ ಅವರ ಸಹೋದರನ ಪುತ್ರ ಕೇದಾರ್ ದಿಘೆ ಅವರನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಕ್ಷೇತ್ರದ ಕೊಪ್ರಿ ಪಚ್ಪಕಾಡಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದಾರೆ.

ಪ್ರಸ್ತುತ ಥಾಣೆ ಜಿಲ್ಲಾ ಪಕ್ಷದ ಅಧ್ಯಕ್ಷರಾಗಿ ಕೇದಾರ್ ದಿಘೆ ಮುಂದುವರಿದಿದ್ದಾರೆ. ಉದ್ಧವ್ ಅವರ ಅನುಯಾಯಿ, ಮಾಜಿ ಸಂಸದ ರಾಜನ್ ವಿಚಾರೆ ಅವರಿಗೆ ಥಾಣೆ ವಿಧಾನಸಭಾ ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ. 2009 ರಿಂದ ಏಕನಾಥ್ ಶಿಂಧೆ ಕೊಪ್ರಿ ಅವರು ಅವಿಭಾಜ್ಯ ಶಿವಸೇನೆ ಪರವಾಗಿ ಪಚ್ಪಖಾಡಿ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿದ್ದಾರೆ. 2019ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 89 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಕ್ಟೋಬರ್ 28 ರಂದು ಸಿಎಂ ಶಿಂಧೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಉಗ್ರವಾದದ ಬಗ್ಗೆ ದ್ವಿಮುಖ ನೀತಿ ಬೇಡ: ಬ್ರಿಕ್ಸ್ ಶೃಂಗದಲ್ಲಿ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಚಾಟಿ​​

Last Updated : 4 hours ago

ABOUT THE AUTHOR

...view details