ಭೀಂಡ್(ಮಧ್ಯ ಪ್ರದೇಶ): ಡಂಪರ್ ಟ್ರಕ್‌ವೊಂದು ನಿಯಂತ್ರಣ ಕಳೆದುಕೊಂಡು ವ್ಯಾನ್ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಮಧ್ಯ ಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಸಂಭವಿಸಿತು.
ಮದುವೆ ಸಂಭ್ರಮ ಮುಗಿಸಿ ವ್ಯಾನ್ನಲ್ಲಿ 8 ಮಂದಿ ವಾಪಸಾಗುತ್ತಿದ್ದರು. ಭೀಂಡ್‌ನ ಜವಾಹರಪುರ ಗ್ರಾಮದ ಬಳಿ ಮುಂಜಾನೆ 5 ಗಂಟೆಗೆ ರಸ್ತೆ ಬದಿಯಲ್ಲಿ ವ್ಯಾನ್ ನಿಲ್ಲಿಸಿದ್ದರು. ಕೆಲವರು ವಾಹನದಿಂದ ಇಳಿದು ರಸ್ತೆ ಬದಿ ನಿಂತಿದ್ದರೆ, ಇನ್ನು ಕೆಲವರು ವ್ಯಾನ್ನಲ್ಲೇ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಡಂಪರ್ ಟ್ರಕ್ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು ಎಂದು ಎಸ್ಪಿ ಅಸಿತ್ ಯಾದವ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 7 ಮಂದಿಯನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.