ಕರ್ನಾಟಕ

karnataka

ETV Bharat / bharat

ಕೃಷ್ಣಗಿರಿಯಲ್ಲಿ ಐವರು ಅಸ್ಸೋಂ ವಲಸೆ ಕಾರ್ಮಿಕರ ಮೇಲೆ ಗುಂಪು ದಾಳಿ: 8 ಜನರ ಬಂಧನ - Mob Attacks

ಕೃಷ್ಣಗಿರಿಯಲ್ಲಿ ಐವರು ಅಸ್ಸೋಂ ಕಾರ್ಮಿಕರ ಮೇಲೆ ಗುಂಪುದಾಳಿ ನಡೆದಿದೆ. ಈ ಹಿನ್ನೆಲೆ 8 ಜನರನ್ನು ಬಂಧಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಕೃಷ್ಣಗಿರಿ
ಕೃಷ್ಣಗಿರಿ

By ETV Bharat Karnataka Team

Published : Mar 7, 2024, 9:15 PM IST

ಕೃಷ್ಣಗಿರಿ (ತಮಿಳುನಾಡು) :50ಕ್ಕೂ ಹೆಚ್ಚು ಜನರ ಗುಂಪೊಂದು ಅಸ್ಸೋಂನ ಐವರು ಕಾರ್ಮಿಕರ ಮೇಲೆ ಬುಧವಾರ ಅಮಾನುಷವಾಗಿ ಹಲ್ಲೆ ನಡೆಸಿರುವ ಭಯಾನಕ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಸಮೀಪದ ಸೆಂಬದಮುತ್ತೂರು, ಬೆಟ್ಟತಲಪಲ್ಲಿ ಮತ್ತು ತುರಿಂಜಿಪಟ್ಟಿ ಗ್ರಾಮಗಳಲ್ಲಿ ನಡೆದಿದೆ. ಮಹಿಳೆ ಮತ್ತು ಆಕೆಯ ಮಗುವನ್ನು ಅಪಹರಿಸಲು ಕಾರ್ಮಿಕರು ಬಂದಿದ್ದಾರೆ ಎಂಬ ಆಧಾರರಹಿತ ವದಂತಿಯಿಂದ ಜನರು ಪ್ರಚೋದನೆಗೆ ಒಳಗಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಸಂತ್ರಸ್ತರಾದ ಕಮಲ್ ಹುಸೇನ್ (30), ನಿಜಾಮ್ ಅಲಿ (26), ಮೊಹಮ್ಮದ್ ಮೆಝುದ್ದೀನ್ (30), ಆಶ್ ಮೊಹಮ್ಮದ್ (30), ಮತ್ತು ಸೊಹಾದ್ ಅಲಿ (31) ಎಂಬುವವರು ಸರ್ಕಾರಿ ಜಮೀನಿನ ಮೂಲಕ ಸರಕು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಪೊಂದು ಹೊಂಚು ಹಾಕಿದೆ. ನಂತರ ಸೆಂಬದಮುತ್ತೂರು, ಬೆತ್ತತಲಪಲ್ಲಿ ಮತ್ತು ತುರಿಂಜಿಪಟ್ಟಿಯಿಂದ ಬಂದ ದಾಳಿಕೋರರು ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರಿದ್ದರೂ ಗುಂಪು ಹಲ್ಲೆ ಮುಂದುವರಿಸಿದೆ. ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಸರ್ಕಾರಿ ಕೃಷ್ಣಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಗುವನ್ನು ಅಪಹರಿಸಲು ಬಂದಿರುವುದಾಗಿ ಆರೋಪಿಸಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ 50 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಂಗದುರೈ ಮಾಧ್ಯಮದವರೊಂದಿಗೆ ಮಾತನಾಡಿ, ''ಕೃಷ್ಣಗಿರಿ ಜಿಲ್ಲೆಯಲ್ಲಿ ಮಕ್ಕಳ ಅಪಹರಣದ ಬಗ್ಗೆ ಯಾವುದೇ ವರದಿಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಮಕ್ಕಳ ಅಪಹರಣದ ಬಗ್ಗೆ ವದಂತಿ ಹರಡುತ್ತಿದೆ. ಸಾರ್ವಜನಿಕರು ಇದನ್ನು ನಂಬಬೇಡಿ. ಯಾರಿಗಾದರೂ ಅನುಮಾನಗಳಿದ್ದರೆ, ಅಂತಹವರು ಪೊಲೀಸ್ ಠಾಣೆಗೆ ದೂರು ನೀಡಬೇಕು. ಅವರ ಮೇಲೆ ದಾಳಿ ನಡೆದರೆ, ನಾವು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಹಾಗೆಯೇ ಉತ್ತರದ ರಾಜ್ಯಗಳ ಕಾರ್ಮಿಕರು ತಮ್ಮ ಕೆಲಸದ ಸ್ಥಳವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಿಗೆ ಅನಗತ್ಯವಾಗಿ ಹೋಗುವುದನ್ನು ತಪ್ಪಿಸಬೇಕು'' ಎಂದಿದ್ದಾರೆ.

ಇದನ್ನೂ ಓದಿ :ಡ್ರಗ್ ಪೆಡ್ಲರ್‌ಗಳ ಬಂಧನಕ್ಕೆ ಹೋದ ಪೊಲೀಸರ ಮೇಲೆ ಗುಂಪು ಹಲ್ಲೆ: ಮಹಿಳಾ ಕಾನ್‌ಸ್ಟೇಬಲ್ ಆಸ್ಪತ್ರೆಗೆ ದಾಖಲು

ABOUT THE AUTHOR

...view details