ಗೋರಖ್‌ಪುರ, ಉತ್ತರಪ್ರದೇಶ: ಗುವಾಹಟಿಯಿಂದ ಜಮ್ಮುವಿಗೆ ತೆರಳುತ್ತಿದ್ದ ಸೇನಾ ವಿಶೇಷ ರೈಲು ಮಂಗಳವಾರ ರಾತ್ರಿ 10:00 ಗಂಟೆ ಸುಮಾರಿಗೆ ಉತ್ತರಪ್ರದೇಶದ ಗೋರಖ್‌ಪುರದ ಕ್ಯಾಂಟ್ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಹಳಿತಪ್ಪಿದೆ. ಇದರಿಂದಾಗಿ ಗೋರಖ್‌ಪುರ - ನರ್ಕಟಿಯಾಗಂಜ್ ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು, ನೌಕರರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೈಲನ್ನು ಹಳಿ ಮೇಲೆ ತರುವ ಪ್ರಯತ್ನ ಮಾಡಿದರು.
ಸುಮಾರು 4 ಗಂಟೆಗಳ ನಂತರ ಹಳಿ ತಪ್ಪಿದ ರೈಲನ್ನು ಹಳಿ ಮೇಲೆ ಇರಿಸಲು ಯಶಸ್ವಿ ಕಾರ್ಯಾಚರಣೆ ಮಾಡಲಾಯಿತು. ರೈಲ್ವೇ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ರೈಲು ಜಮ್ಮುವಿಗೆ ಹೊರಟಿದೆ, ಈ ರೈಲು ಕ್ಯಾಂಟ್ ನಿಲ್ದಾಣದ ಐದನೇ ಲೈನ್ ಮೂಲಕ ಗೋರಖ್‌ಪುರ ಜಂಕ್ಷನ್‌ಗೆ ಚಲಿಸುತ್ತಿತ್ತು, ಈ ವೇಳೆ ಎರಡನೇ ಕೋಚ್ ಹಳಿತಪ್ಪಿತು. ಇದರಿಂದಾಗಿ ನರ್ಕಟಿಯಾಗಂಜ್ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.