ಮುಂಬೈ :ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್ ಅವರನ್ನು ಮತ್ತೆ ಇಡಿ ವಿಚಾರಣೆಗೆ ಒಳಪಡಿಸಿತು. ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ದೆಹಲಿಯಲ್ಲಿದ್ದಾರೆ. ಮತ್ತೊಂದೆಡೆ ಶರದ್ ಪವಾರ್ ಪತ್ನಿ ಪ್ರತಿಭಾ ಪವಾರ್ ಅವರು ಮೊಮ್ಮಗನಿಗಾಗಿ ಎನ್‌ಸಿಪಿ ಪಕ್ಷದ ಕಚೇರಿಗೆ ಎಂಟ್ರಿ ಕೊಟ್ಟ ಘಟನೆಯೂ ನಡೆದಿದೆ.
ಪಕ್ಷದ ಕಚೇರಿ ತಲುಪಿದ ಅಜ್ಜಿ ಪ್ರತಿಭಾ : ಬಾರಾಮತಿ ಆಗ್ರೋ ಕಂಪನಿ ಪ್ರಕರಣದಲ್ಲಿ ಶರದ್ ಪವಾರ್ ಮೊಮ್ಮಗ, ಶಾಸಕ ರೋಹಿತ್ ಪವಾರ್ ಅವರನ್ನು ಇಡಿ ಕಚೇರಿಯಲ್ಲಿ ಇಂದು ಎರಡನೇ ಬಾರಿಗೆ ವಿಚಾರಣೆ ನಡೆಸಲಾಯಿತು. ಜನವರಿ 24 ರಂದು ರೋಹಿತ್ ಪವಾರ್ ಅವರ ವಿಚಾರಣೆಯ ಸಂದರ್ಭದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಬೆಂಬಲಕ್ಕಾಗಿ ಪಕ್ಷದ ಕಚೇರಿಯಲ್ಲಿ ಕುಳಿತ್ತಿದ್ದರು.
ಕೇಂದ್ರ ಬಜೆಟ್‌ನಿಂದಾಗಿ ಪವಾರ್ ಮತ್ತು ಸುಳೆ ದೆಹಲಿಯಲ್ಲಿದ್ದಾರೆ. ಈ ಕಾರಣಕ್ಕಾಗಿ ಅಜ್ಜಿ ಪ್ರತಿಭಾ ಮತ್ತು ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ತಮ್ಮ ಮೊಮ್ಮಗನಿಗೆ ಬೆಂಬಲ ಸೂಚಿಸಲು ಎನ್‌ಸಿಪಿ ಕಚೇರಿಯಲ್ಲಿ ಕುಳಿತಿದ್ದರು. ರೋಹಿತ್ ಪವಾರ್ ವಿರುದ್ಧ ಇಡಿ ತನಿಖೆ ಆಗುವವರೆಗೂ ಪಕ್ಷದ ಕಚೇರಿಯಲ್ಲಿಯೇ ಇರಲಿದ್ದಾರೆ. ಹೀಗಾಗಿ ರೋಹಿತ್ ಪವಾರ್ ಪರ ಅಜ್ಜಿ ಪ್ರತಿಭಾ ಕಣಕ್ಕೆ ಇಳಿದಿದ್ದಾರೆ ಎಂಬ ರಾಜಕೀಯ ಚರ್ಚೆಗಳು ಶುರುವಾಗಿವೆ.
ನಾನು ಮೊದಲು ವ್ಯಾಪಾರಕ್ಕೆ ಬಂದೆ, ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ: ಜನವರಿ 24 ರಂದು ರೋಹಿತ್ ಪವಾರ್ ಅವರನ್ನು 11 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಬಾರಾಮತಿ ಆಗ್ರೋ ಪ್ರಕರಣದಲ್ಲಿ ಅವರನ್ನು ಇಂದು ಎರಡನೇ ಬಾರಿಗೆ ವಿಚಾರಣೆ ನಡೆಸಲಾಗುತ್ತಿದೆ. ಅಜಿತ್ ಪವಾರ್ಗೆ ಕ್ಲೀನ್ ಚಿಟ್ ನೀಡಲಾಗಿದ್ದು, ರೋಹಿತ್ ಪವಾರ್ ವಿಚಾರಣೆ ಎದುರಿಸಬೇಕಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಪವಾರ್, ಜನವರಿ 20 ರಂದು EOW ಮುಚ್ಚಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 19ರಂದು ಇಡಿ ನನಗೆ ನೋಟಿಸ್ ಕಳುಹಿಸಿದೆ. ಮುಚ್ಚಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನಾನು ಮಾಧ್ಯಮದಿಂದ ತಿಳಿದುಕೊಂಡಿದ್ದೇನೆ. ಆ ಮುಚ್ಚಿದ ವರದಿ ನಮಗೂ ಸಿಗಲಿ ಎಂದು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.