ರಾಯ್ಪುರ:ಉದ್ಯೋಗಸ್ಥ ಮಹಿಳೆಯರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಚತ್ತೀಸ್ಗಢದಲ್ಲಿ ಈ ರಜೆ ನೀತಿಯನ್ನು ಜಾರಿಗೆ ತರಲಾಗಿದೆ. ಚತ್ತೀಸ್ಗಢದ ಹಿದಾಯುತ್ತುಲ್ಲಾ ಕಾನೂನು ವಿಶ್ವವಿದ್ಯಾಲಯ ಈ ಮುಟ್ಟಿನ ರಜೆ ನೀತಿಯನ್ನು ಈಗಾಗಲೇ ಆರಂಭಿಸಿರುವುದಾಗಿ ಘೋಷಿಸಿದೆ. ಮಾಸಿಕ ಋತುಚಕ್ರದ ಕಠಿಣವಾದ ಒಂದು ದಿನದಲ್ಲಿ ವಿದ್ಯಾರ್ಥಿನಿಯರು ಈ ರಜೆಯನ್ನು ಪಡೆಯಬಹುದು ಎಂದು ಘೋಷಿಸಿದೆ. ಈ ನೀತಿಯನ್ನು ಜುಲೈ 1ರಿಂದಲೇ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.
ಚತ್ತೀಸ್ಗಢದಲ್ಲಿ ಮುಟ್ಟಿನ ರಜೆ: ಈ ರಜೆ ನೀತಿ ಕುರಿತು ಮಾತನಾಡಿರುವ ಕಾನೂನು ವಿಶ್ವವಿದ್ಯಾಯಲದ ವಕ್ತಾರರು, ವಿದ್ಯಾರ್ಥಿನಿಯರು ಮಾಸಿಕವಾಗಿ ತಮ್ಮ ಋತುಚಕ್ರದ ದಿನಗಳಲ್ಲಿ ಒಂದು ದಿನ ರಜೆಯನ್ನು ಪಡೆಯಬಹುದಾಗಿದೆ. ಈ ದಿನ ಅವರು ತಮ್ಮ ಹಾಜರಾತಿ ಪಡೆಯಲಿದ್ದಾರೆ. ಸಾಮಾನ್ಯ ಕಾಲೇಜು ದಿನಗಳಲ್ಲಿ ಈ ರೀತಿಯ ಹಾಜರಾತಿ ಪ್ರಯೋಜನವನ್ನು ಅವರು ಹೊಂದಬಹುದಾಗಿದೆ. ಮುಂದಿನ ದಿನದಲ್ಲಿ ಪರೀಕ್ಷೆಗಳಂತಹ ಸಂದರ್ಭದಲ್ಲಿ ವಿಶೇಷ ಅಗತ್ಯತೆ ಮೇಲೆ ರಜೆಗಳನ್ನು ನೀಡುವ ಕುರಿತು ಚಿಂತಿಸಲಾಗುವುದು. ವಿದ್ಯಾರ್ಥಿನಿಯರು ಅನಿಯಮಿತ ಋತುಚಕ್ರ ಸಿಂಡ್ರೋಮ್ ಅಥವಾ ಪಿಸಿಒಎಸ್ ಸಮಸ್ಯೆಗಳಿಗೆ ರಜೆ ಪಡೆಯಬಹುದಾಗಿದೆ. ಪ್ರತಿ ಸೆಮಿಸ್ಟರ್‌ಗೆ ಪ್ರತಿ ವಿಷಯಕ್ಕೆ ಆರು ತರಗತಿಗಳಲ್ಲಿ ಈ ನೀತಿ ಮೂಲಕ ಹಾಜರಾತಿ ಪಡೆಯಬಹುದಾಗಿದೆ ಎಂದರು.