ನವದೆಹಲಿ : ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಮಹಾಕುಂಭ ಮೇಳ ಶುರುವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಆರಾಧಿಸುವವರಿಗೆ ಇದು ಅತ್ಯಂತ ವಿಶೇಷ ದಿನ ಎಂದು ಬಣ್ಣಿಸಿದ್ದಾರೆ. ಈ ಬೃಹತ್ ಧಾರ್ಮಿಕ ಕಾರ್ಯಕ್ರಮವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
"ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಕುರಿತು ಕಾಳಜಿ ಹೊಂದಿರುವವರಿಗೆ ಇದು ಅತ್ಯಂತ ವಿಶೇಷ ದಿನ! ಮಹಾಕುಂಭ ಮೇಳ 2025 ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದ್ದು, ಅಸಂಖ್ಯಾತ ಜನರನ್ನು ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿ ಎಂಬ ಪವಿತ್ರ ಸಂಗಮದಲ್ಲಿ ಒಗ್ಗೂಡಿಸುತ್ತಿದೆ. ಮಹಾಕುಂಭ ಮೇಳವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆ ಮತ್ತು ನಂಬಿಕೆ ಹಾಗು ಸಹಿಷ್ಣುತೆಯನ್ನು ಆಚರಿಸುತ್ತದೆ" ಎಂದು ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.