ಕವರ್ಧಾ (ಛತ್ತೀಸ್‌ಗಢ) : ಛತ್ತೀಸ್‌ಗಢದ ಕವರ್ಧಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದರು. ಈ ಎಲ್ಲ ಮೃತದೇಹಗಳ ಅಂತಿಮ ಸಂಸ್ಕಾರವನ್ನು ಅವರ ಸ್ವಗ್ರಾಮದಲ್ಲಿ ನಡೆಸಲಾಯಿತು. 16 ಮಂದಿ ಮಹಿಳೆಯರು ಮತ್ತು ಒಬ್ಬ ಪುರುಷನ ಅಂತಿಮ ಸಂಸ್ಕಾರವನ್ನು ಬುಡಕಟ್ಟು ಪದ್ಧತಿಯಂತೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು. ಇದೀಗ ಛತ್ತೀಸ್‌ಗಢದ ಕವರ್ಧಾದ ಸೆಮ್ಹಾರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ನೀರವ ಮೌನ ಆವರಿಸಿದೆ. ಈ ದೃಶ್ಯ ಎಂಥವರ ಎದೆಯನ್ನು ನಡುಗಿಸಿದೆ.
ಅವಘಡ ಸಂಭವಿಸಿದ್ದು ಯಾವಾಗ ?:ಸೆಮ್ಹಾರ ಗ್ರಾಮದ 36 ಗ್ರಾಮಸ್ಥರು ನಿನ್ನೆ ಟೆಂಡು ಎಲೆ ಕೀಳಲು ರುಖ್ಮಿದಾರ್ ಅರಣ್ಯಕ್ಕೆ ಹೋಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಟೆಂಡು ಎಲೆಗಳನ್ನು ಕಿತ್ತುಕೊಂಡು ಹಿಂತಿರುಗುತ್ತಿದ್ದಾಗ ಬಹಪಾನಿ ಗ್ರಾಮದ ಬಳಿಯ ಘಾಟ್‌ನಲ್ಲಿ ಗ್ರಾಮಸ್ಥರಿದ್ದ ಪಿಕಪ್ 30 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ವೇಳೆ, ಕಾರು ಚಾಲಕ ಚಾಲನಾ ಸೀಟಿನಿಂದ ಜಿಗಿದಿದ್ದಾನೆ. ಕಾರಿನಲ್ಲಿದ್ದ ಸುಮಾರು 15 ಮಂದಿ ಕೂಡ ಕಾರಿನಿಂದ ಜಿಗಿದಿದ್ದಾರೆ.
ಪಿಕಪ್ ಕಂದಕಕ್ಕೆ ಉರುಳಿದ ನಂತರ 13 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ 8 ಮಹಿಳೆಯರನ್ನು ಕುಕ್ದೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲಿ 5 ಮಹಿಳೆಯರು ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಉಪಮುಖ್ಯಮಂತ್ರಿ ಭಾಗಿ : ಸಾಮೂಹಿಕ ಅಂತ್ಯಕ್ರಿಯೆ ವೇಳೆ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಹಾಗೂ ಸ್ಥಳೀಯ ಶಾಸಕಿ ಭಾವನಾ ಬೊಹ್ರಾ ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ಪ್ರಧಾನಿ, ರಾಷ್ಟ್ರಪತಿ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ದೊಡ್ಡ ನಾಯಕರು ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಅಂತಿಮ ವಿಧಿವಿಧಾನ ನೆರವೇರಿಸಿದವರ ಹೆಸರು
ಮಿಲಾ ಬಾಯಿ (48)
ಟಿಕು ಬಾಯಿ (40)
ಪರ್ಸಾದಿಯಾ ಬಾಯಿ
ಜಾನಿಯಾ ಬಾಯಿ (35)
ಮುಂಗಿಯಾ ಬಾಯಿ (60)
ಜಾಂಗ್ಲೋ ಬಾಯಿ (62)
ಸಿಯಾ ಬಾಯಿ (50)
ಕಿರಣ್ ಕುಮಾರಿ (15)
ಪ್ಯಾಂಟೊರಿನ್ ಬಾಯಿ (35)