ಸಿಲಿಗುರಿ(ಪಶ್ಚಿಮ ಬಂಗಾಳ): ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದ ತನಿಖೆಯ 29 ಪುಟಗಳ ತಾತ್ಕಾಲಿಕ ವರದಿಯನ್ನು ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತ ಜನಕ್ ಕುಮಾರ್ ಗರ್ಗ್ ಅವರು ಮಂಗಳವಾರ ರೈಲ್ವೆ ಮಂಡಳಿಗೆ ಸಲ್ಲಿಸಿದರು.
ವರದಿಯಲ್ಲೇನಿದೆ?
- ರಂಗಪಾಣಿ ರೈಲ್ವೇ ಸ್ಟೇಷನ್ ಮಾಸ್ಟರ್ ದೋಷಪೂರಿತ ಸ್ವಯಂಚಾಲಿತ ಸಿಗ್ನಲಿಂಗ್‌ನಿಂದ T/D 912 ಬದಲಿಗೆ T/A 912 ನೀಡಿರುವುದು ಅಪಘಾತಕ್ಕೆ ಒಂದು ಕಾರಣ. ಏಕೆಂದರೆ, T/A 912 ನೀಡಿದಾಗ ಅದು ರೈಲಿನ ಗರಿಷ್ಠ ವೇಗವನ್ನು ನಿರ್ದಿಷ್ಟಪಡಿಸಿಲ್ಲ.
- ಗೂಡ್ಸ್ ರೈಲಿಗೆ ಎಚ್ಚರಿಕೆಯ ಆದೇಶ ನೀಡದೇ ಇರುವುದು.
- ಚಾಲಕರು, ಸಹಾಯಕ ಚಾಲಕರು ಮತ್ತು ಗೂಡ್ಸ್ ರೈಲುಗಳ ನಿರ್ವಾಹಕರು ಸುರಕ್ಷತಾ ಗೇರ್ ಅಥವಾ ವಾಕರ್‌ಗಳನ್ನು ಬಳಸದೇ ಇರುವುದು.
- ಸ್ಟೇಷನ್ ಮಾಸ್ಟರ್ ಟಿ/ಎ 912 ಮೆಮೊಗೆ ರೈಲು ನಿರ್ವಾಹಕರು ಸಹಿ ಮಾಡಿಲ್ಲ.
- ರೈಲ್ವೇ ಅಧಿಕಾರಿಗಳು ಸ್ವಯಂಚಾಲಿತ ಸಿಗ್ನಲಿಂಗ್ ಅಡಿಯಲ್ಲಿ ರೈಲುಗಳನ್ನು ನಿರ್ವಹಿಸುವಲ್ಲಿ ಚಾಲಕರು ಮತ್ತು ಸ್ಟೇಷನ್ ಮಾಸ್ಟರ್‌ಗಳಿಗೆ ಸಾಕಷ್ಟು ತರಬೇತಿ ನೀಡಿಲ್ಲ.
- T/A 912 ನೀಡಿದಾಗ ರೈಲು ಚಾಲಕರು, ನಿರ್ವಾಹಕರು ಮತ್ತು ಸ್ಟೇಷನ್ ಮಾಸ್ಟರ್‌ಗಳು ಸೇರಿದಂತೆ ಸಿಬ್ಬಂದಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಂಚಾರ ನಿರೀಕ್ಷಕರು ಮತ್ತು ಮುಖ್ಯ ಲೋಕೋ ಬೋಧಕರಿಗೆ ಅನುಭವದ ಕೊರತೆ.