ಕರ್ನಾಟಕ

karnataka

ETV Bharat / bharat

ಬಿಜೆಪಿಯ ದೇವೇಂದ್ರ ಸಿಂಗ್ ರಾಣಾ ಇನ್ನಿಲ್ಲ, ಗಣ್ಯರಿಂದ ಸಂತಾಪ

ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಮತ್ತು ಹಾಲಿ ಶಾಸಕ ದೇವೇಂದ್ರ ಸಿಂಗ್ ರಾಣಾ (59) ಗುರುವಾರ ಹರಿಯಾಣದ ಫ್ರೈದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

DEVENDER SINGH RANA PASSES AWAY  BJP MLA DEVENDER SINGH RANA  CONDOLE DEMISE OF BJP MLA  LG MANOJ SINHA AND MEHBOOBA MUFTI
ಬಿಜೆಪಿಯ ದೇವೇಂದ್ರ ಸಿಂಗ್ ರಾಣಾ ಇನ್ನಿಲ್ಲ (ANI)

By ETV Bharat Karnataka Team

Published : 4 hours ago

Updated : 4 hours ago

BJP MLA Devender Singh Rana is No more:ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ವಿಧಾನಸಭಾ ಕ್ಷೇತ್ರದ ಹಿರಿಯ ಬಿಜೆಪಿ ನಾಯಕ ಮತ್ತು ಹಾಲಿ ಶಾಸಕ ದೇವೇಂದ್ರ ಸಿಂಗ್ ರಾಣಾ ಅವರು ನಿಧನರಾಗಿದ್ದಾರೆ. ಗುರುವಾರ ಹರಿಯಾಣದ ಫ್ರೈದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ರಾಣಾ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕಿರಿಯ ಸಹೋದರ. ಅವರ ಸಾವಿನ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ಗಣ್ಯರು ಬಿಜೆಪಿ ಶಾಸಕ ದೇವೆಂದರ್ ಸಿಂಗ್ ರಾಣಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಜನರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟ ದೇಶಭಕ್ತ ಮತ್ತು ವ್ಯಾಪಕ ಗೌರವಾನ್ವಿತ ನಾಯಕನನ್ನು ದೇಶ ಕಳೆದುಕೊಂಡಿದೆ ಎಂದು ಹೇಳಿದರು.

X ನಲ್ಲಿ ಪೋಸ್ಟ್​ ಮಾಡಿದ ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ ಅವರು, "ದೇವೇಂದ್ರ ಸಿಂಗ್ ರಾಣಾ ಅವರ ಅಕಾಲಿಕ ನಿಧನದ ಬಗ್ಗೆ ತಿಳಿದು ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನಾವು ದೇಶಭಕ್ತ ಮತ್ತು ಗೌರವಾನ್ವಿತ ನಾಯಕನನ್ನು ಕಳೆದುಕೊಂಡಿದ್ದೇವೆ. ಇಲ್ಲಿನ ಜನರ ಯೋಗಕ್ಷೇಮಕ್ಕಾಗಿ ಅವರು ದುಡಿದಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ಹೇಳಿದರು.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಬಿಜೆಪಿ ಶಾಸಕ ದೇವೇಂದ್ರ ರಾಣಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೇವಿಂದರ್ ರಾಣಾ ಜಿಯವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಆಳವಾದ ಸಂತಾಪಗಳು ಎಂದು ಮುಫ್ತಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಬಿಜೆಪಿ ಮುಖಂಡ ಕವೀಂದ್ರ ಗುಪ್ತಾ ಕೂಡ ಬಿಜೆಪಿ ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದು ದುರದೃಷ್ಟಕರ... ಜಮ್ಮುವಿಗೆ ಅಪಾರ ನಷ್ಟ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕಿರಿಯ ಸಹೋದರ ದೇವೇಂದ್ರ ಸಿಂಗ್ ರಾಣಾ ಅವರು ಗುರುವಾರ ನಿಧನರಾದ ಹಿನ್ನೆಲೆ ಅವರ ನಿವಾಸಕ್ಕೆ ಆಗಮಿಸಿದರು. ಇತ್ತೀಚೆಗೆ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದೇವೇಂದ್ರ ಸಿಂಗ್ ರಾಣಾ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರು. ಅವರು ನಗ್ರೋಟಾದಿಂದ ಚುನಾಯಿತರಾದರು. ರಾಣಾ ಅವರು ತಮ್ಮ ಪ್ರತಿಸ್ಪರ್ಧಿಯಾದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (JKNC) ನ ಜೋಗಿಂದರ್ ಸಿಂಗ್ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ:ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅನಾಹುತ: 4 ಕಾರು, 1 ಆಟೋ ಬೆಂಕಿಗೆ ಆಹುತಿ. ತಮಿಳುನಾಡಲ್ಲೂ ಭಾರಿ ಬೆಂಕಿ

Last Updated : 4 hours ago

ABOUT THE AUTHOR

...view details