ನವದೆಹಲಿ: ಅಡುಗೆಮನೆಯ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ಅಡುಗೆ ಮನೆಯಲ್ಲಿ ಬಳಸಲಾಗುವ ಸ್ಟೇನ್ ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)ಗೆ ಅನುಗುಣವಾಗಿರುವುದನ್ನು ಕಡ್ಡಾಯಗೊಳಿಸಿರುವುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮಾರ್ಚ್ 14, 2024ರಂದು ಹೊರಡಿಸಿದ ಗುಣಮಟ್ಟ ನಿಯಂತ್ರಣ ಆದೇಶದ ಪ್ರಕಾರ, ಅಡುಗೆ ಮನೆಯ ಪಾತ್ರೆಗಳಿಗೆ ಐಎಸ್ಐ ಗುರುತು ಕಡ್ಡಾಯ. ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳಿಗಾಗಿ ಐಎಸ್ 14756:2022 ಮತ್ತು ಅಲ್ಯೂಮಿನಿಯಂ ಪಾತ್ರೆಗಳಿಗೆ ಐಎಸ್ 1660:2024 ಸೇರಿದಂತೆ ಅಡುಗೆ ಮನೆಯ ವಸ್ತುಗಳಿಗೆ ಬಿಐಎಸ್ ಇತ್ತೀಚೆಗೆ ಸಮಗ್ರ ಮಾನದಂಡಗಳನ್ನು ರೂಪಿಸಿದೆ.
ಐಎಸ್ಐ ಗುರುತು ಹೊಂದಿರದ ಯಾವುದೇ ಸ್ಟೇನ್ ಲೆಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗಳ ತಯಾರಿಕೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಅಥವಾ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಪಾಲಿಸದಿರುವುದು ಶಿಕ್ಷಾರ್ಹ ಅಪರಾಧವಾಗಿದೆ.
ಐಎಸ್ 1660:2024 ಮಾನದಂಡದ ಪ್ರಮುಖ ಅಂಶಗಳು ಹೀಗಿವೆ:
• ಸಾಮಾನ್ಯ ಅವಶ್ಯಕತೆಗಳು: ಪಾತ್ರೆಗಳ ತಯಾರಿಕೆಗೆ ಬಳಸಲಾದ ವಸ್ತುಗಳ ಒಟ್ಟಾರೆ ಗುಣಮಟ್ಟ ಮತ್ತು ದಪ್ಪ