ಕರ್ನಾಟಕ

karnataka

ETV Bharat / bharat

ಮುಂದುವರೆದ ರೈಲು ಹಳಿ ತಪ್ಪಿಸುವ ಸಂಚು; ಪಂಜಾಬ್​ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ಬಯಲು - ATTEMPT TO DERAIL A TRAIN - ATTEMPT TO DERAIL A TRAIN

ಬಟಿಂಡಾದಿಂದ ಬಿಡಬ್ಲ್ಯೂಎಲ್​ ಕೊರಿಯತ್ತ ಗೂಡ್ಸ್​ ರೈಲು ಸಾಗುತ್ತಿತ್ತು. ಈ ವೇಳೆ ಕಬ್ಬಿಣದ ರಾಡ್​ ಪತ್ತೆಯಾಗಿದ್ದು, ಪಾಯಿಂಟ್ಸ್​ಮ್ಯಾನ್​ ಮತ್ತು ಸಹಾಯಕ ಸ್ಟೇಷನ್​ ಮಾಸ್ಟರ್​ ತೆರವು ಮಾಡಿದ್ದಾರೆ.

ATTEMPT TO DERAIL A TRAIN
ರೈಲು ಹಳಿ ತಪ್ಪಿಸುವ ಸಂಚು (ETV Bharat)

By PTI

Published : Sep 23, 2024, 1:05 PM IST

ಚಂಢೀಗಢ್​​: ರೈಲು ಅಪಘಾತ ನಡೆಸುವ ದುರುದ್ದೇಶದ ವಿಧ್ವಂಸಕ ಕೃತ್ಯದ ಪ್ರಯತ್ನಗಳು ವರದಿಯಾಗುತ್ತಲೇ ಇದ್ದು, ಇದೀಗ ಪಂಜಾಬ್​ನಲ್ಲಿ ರೈಲು ಹಳಿ ತಪ್ಪಿಸುವ ಪ್ರಯತ್ನ ಬಯಲಾಗಿದೆ. ಪಂಜಾಬ್​ನ ಬಟಿಂಡಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು 9 ಕಬ್ಬಿಣದ ರಾಡ್​ಗಳನ್ನು ಹಳಿಯ ಮೇಲೆ ಇರಿಸಿದ್ದರು. ಅದೃಷ್ಟವಶಾತ್​ ಲೋಕೋ ಪೈಲಟ್​​ನಿಂದಾಗಿ ಈ ಅವಘಡ ತಪ್ಪಿದೆ.

ಏನಿದು ಘಟನೆ: ದೆಹಲಿ ಮತ್ತು ಬಟಿಂಡಾ ಮಾರ್ಗದ ಬಂಗಿ ನಗರ್​ನ ರೈಲ್ವೆ ಹಳಿಗಳ ಮೇಲೆ 9 ಕಬ್ಬಿಣದ ರಾಡ್​ಗಳು ಪತ್ತೆಯಾಗಿವೆ. ಭಾನುವಾರ ರಾತ್ರಿ ಹಳಿಗಳ ಮೇಲೆ ರಾಡ್​ ಬಿದ್ದಿರುವುದು ಗೂಡ್ಸ್​ ರೈಲಿನ ಲೋಕೊ ಪೈಲೆಟ್​​ ಕಂಡಿದ್ದು, ತಕ್ಷಣ ರೈಲು ನಿಲ್ಲಿಸಿದ್ದಾರೆ. ಅಲ್ಲದೇ ಕೂಡಲೇ ಇದರ ಕುರಿತು ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್​ಪಿ) ಒಂಭತ್ತು ಕಬ್ಬಿಣದ ರಾಡ್​ ಅನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾತನಾಡಿದ ಅಧಿಕಾರಿ, ಬಟಿಂಡಾದಿಂದ ಬಿಡಬ್ಲ್ಯೂಎಲ್​ ಕೊರಿಯತ್ತ ಗೂಡ್ಸ್​ ರೈಲು ಸಾಗುತ್ತಿತ್ತು. ಈ ವೇಳೆ ಕಬ್ಬಿಣದ ರಾಡ್​ ಪತ್ತೆಯಾಗಿದ್ದು, ಪಾಯಿಂಟ್ಸ್​ಮ್ಯಾನ್​ ಮತ್ತು ಸಹಾಯಕ ಸ್ಟೇಷನ್​ ಮಾಸ್ಟರ್​ ತೆರವು ಮಾಡಿದ್ದಾರೆ. ಘಟನೆಯಿಂದ ರೈಲು 40 ನಿಮಿಷ ನಿಂತಿತು ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೆ ಭದ್ರತಾ ದಳ ಮತ್ತು ಜಿಆರ್​ಪಿ ಅಧಿಕಾರಿಗಳು ಭೇಟಿ ನೀಡಿದ್ದು, ಸ್ಥಳದ ಪರಿಶೀಲನೆ ನಡೆಸಿದರು. ಜೊತೆಗೆ, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗಿದೆ. ಪ್ರಕರಣ ಸಂಬಂಧ ಜಿಆರ್​ಪಿ ತನಿಖೆಗೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಲಾಗಿದ್ದು, ದುಷ್ಕರ್ಮಿಗಳು ದುರುದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಈ ಸಂಬಂಧ ತನಿಖೆ ನಡೆಸಲಾಗುವುದು. ಶೀಘ್ರದಲ್ಲೇ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಳೆದ ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್​ 21ರಂದು ಗುಜರಾತ್​ನ ಸೂರತ್​ನಲ್ಲಿ ಹಳಿಗಳ ಮೇಲಿನ ಫಿಶ್​ ಪ್ಲೇಟ್​ ಮತ್ತು ಕೀಗಳನ್ನು ಕಿತ್ತು ಹಾಕಿ ರೈಲು ಅಪಘಾತಕ್ಕೆ ಸಂಚು ರೂಪಿಸುವ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೂ ಮುನ್ನ ಸೆಪ್ಟೆಂಬರ್​ 10ರಂದು ರಾಜಸ್ಥಾನದ ಅಜ್ಮೇರ್‌ನಲ್ಲಿ ಸರಧಾನ ಮತ್ತು ಬಂಗಧ್ ನಡುವಿನ ರೈಲ್ವೆ ಹಳಿಗಳ ಮೇಲೆ 100 ಕೆಜಿ ತೂಕದ ಎರಡು ಸಿಮೆಂಟ್​ ಬ್ಲಾಕ್​ಗಳನ್ನು ಇರಿಸಲಾಗಿತ್ತು. ಉತ್ತರ ಪ್ರದೇಶದ ಭಿವಾನಿ-ಪ್ರಯಾಗ್​ರಾಜ್​ ಮಾರ್ಗದ ಕಾಳಿಂದಿ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸಲು ಕಾನ್ಪುರದಲ್ಲಿ ದುಷ್ಕರ್ಮಿಗಳು ಎಲ್​ಪಿಜಿ ಸಿಲಿಂಡರ್​ ಜೊತೆಗೆ ಪೆಟ್ರೋಲ್​ ಮತ್ತು ಬೆಂಕಿಪೊಟ್ಟಣವನ್ನು ಟ್ರ್ಯಾಕ್​ ಮೇಲೆ ಎಸೆದಿದ್ದ ಘಟನೆ ನಡೆದಿತ್ತು.

ಇದನ್ನೂ ಓದಿ: ಗುಜರಾತ್​​: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ

ABOUT THE AUTHOR

...view details