ನವದೆಹಲಿ: ಭಾರತವು ಮಂಗಳವಾರ ಪ್ಯಾಲೆಸ್ತೀನ್‌ಗೆ 30 ಟನ್ ಮಾನವೀಯ ನೆರವನ್ನು ಕಳುಹಿಸಿದ್ದು, ಯುದ್ಧ ಪೀಡಿತ ಪ್ರದೇಶಕ್ಕೆ ತನ್ನ ಬೆಂಬಲ ಮುಂದುವರೆಸಿದೆ. ಪ್ಯಾಲೆಸ್ಟೈನ್ ಜನರಿಗೆ ವೈದ್ಯಕೀಯ ಸರಬರಾಜು, ಅಗತ್ಯ ಜೀವ ಉಳಿಸುವ ಔಷಧಗಳು ಮತ್ತು ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಸಾಗಿಸುವ ಎರಡನೇ ಸಾಗಣೆ ಇದಾಗಿದೆ.
"ಪ್ಯಾಲೆಸ್ತೀನ್ ಜನರಿಗೆ ಭಾರತದ ಬೆಂಬಲ ಮುಂದುವರಿದಿದೆ. ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವು ವಿಸ್ತರಿಸುವ ಮೂಲಕ ಭಾರತವು ಪ್ಯಾಲೆಸ್ಟೈನ್ಗೆ ಅಗತ್ಯ ಜೀವ ಉಳಿಸುವ ಮತ್ತು ಕ್ಯಾನ್ಸರ್ ವಿರೋಧಿ ಔಷಧಗಳನ್ನು ಒಳಗೊಂಡಿರುವ 30 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಎಕ್ಸ್ ಮೂಲಕ ತಿಳಿಸಿದೆ.
ಅಕ್ಟೋಬರ್ 22 ರಂದು ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) ಮೂಲಕ ಪ್ಯಾಲೆಸ್ಟೈನ್ಗೆ ಮೊದಲ ಸಾಗಣೆಯನ್ನು ರವಾನಿಸಿತ್ತು. ಈ ಆರಂಭಿಕ ಬ್ಯಾಚ್‌ನಲ್ಲಿ 30 ಟನ್‌ಗಳಷ್ಟು ಔಷಧಗಳು ಮತ್ತು ಆಹಾರ ಪದಾರ್ಥಗಳು ಸೇರಿದ್ದವು. ಇದರಲ್ಲಿ ಅಗತ್ಯ ವೈದ್ಯಕೀಯ ಸರಬರಾಜುಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ದಂತ ಉತ್ಪನ್ನಗಳು, ಸಾಮಾನ್ಯ ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನ ಶಕ್ತಿಯ ಬಿಸ್ಕತ್ತುಗಳು ಒಳಗೊಂಡಿದ್ದವು.
ಇದೇ ರೀತಿಯ ಮಾನವೀಯ ಉಪಕ್ರಮದಲ್ಲಿ, ಭಾರತವು ಅಕ್ಟೋಬರ್ 18 ರಂದು ಲೆಬನಾನ್‌ಗೆ 11 ಟನ್‌ಗಳ ವೈದ್ಯಕೀಯ ಸಾಮಗ್ರಿಗಳ ಸಾಗಣೆಯನ್ನು ಕಳುಹಿಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಹೆಚ್ಚುತ್ತಿರುವ ಸಂಘರ್ಷಕ್ಕೆ ಪ್ರತಿಕ್ರಿಯೆಯಾಗಿ ಒಟ್ಟು 33 ಟನ್‌ಗಳ ನೆರವನ್ನು ಯೋಜಿಸಲಾಗಿದೆ. ಹಮಾಸ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪ್ಯಾಲೆಸ್ಟೈನ್ದವರಿಗೆ ಸಹಾಯ ಮಾಡುವ ವಿಶ್ವಸಂಸ್ಥೆ ಏಜೆನ್ಸಿಯನ್ನು ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಭಾರತ ವಾಗ್ದಾನ ಮಾಡಿತ್ತು.
ಓದಿ:ಗಂಟೆಗೂ ಹೆಚ್ಚಿನ ಕಾಲ ಗುಂಡಿನ ಚಕಮಕಿ: ಕೊನೆಗೂ ಉಗ್ರರಿಬ್ಬರನ್ನು ಹೊಡೆದುರುಳಿಸಿದ ಭಾರತೀಯ ಸೇನೆ