ತಿರುವನಂತಪುರಂ: ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರ ಸ್ವಾಮದ್ಯದ OTT C ಸ್ಪೇಸ್ ಅನ್ನು ಆರಂಭಿಸಲಾಗಿದೆ. ಇದು ಇಂದಿನಿಂದ ಅಧಿಕೃತವಾಗಿ ಕಾರ್ಯಾರಂಭ ಆಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಿ ಸ್ಪೇಸ್ ಒಟಿಟಿ ವೇದಿಕೆಯನ್ನು ದೇಶಕ್ಕೆ ಸಮರ್ಪಿಸಿದರು. ಈ ಎಲ್ಲ ಪ್ರೇಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ಕಲಾತ್ಮಕ ಚಲನಚಿತ್ರಗಳನ್ನು ಆನಂದಿಸಲು ಈ ಮೂಲಕ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಡಿ OTT ವೇದಿಕೆ ನಿರ್ಮಿಸಲಾಗಿದೆ. ಇಂದಿನಿಂದ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಾಗಲಿದೆ.
ಸಿ ಸ್ಪೇಸ್ ಒಟಿಟಿ ಪ್ಲಾಟ್‌ಫಾರ್ಮ್: ಇತರ OTT ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ C ಸ್ಪೇಸ್‌ನ ವಿಶೇಷತೆ ಎಂದರೆ ಜನರು ಪೇ - ಪರ್-ವ್ಯೂ ಆಧಾರದ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಬಹುದು. OTT ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲ ವಿಷಯಗಳಿಗೆ ಪ್ರೇಕ್ಷಕರು ಹಣ ಪಾವತಿಸಬೇಕಾಗಿಲ್ಲ. ಅವರು ಸಿ - ಸ್ಪೇಸ್‌ನಲ್ಲಿ ವೀಕ್ಷಿಸಿದ ಚಲನಚಿತ್ರಗಳಿಗೆ ಮಾತ್ರ ಹಣ ಪಾವತಿಸಬಹುದು. ಫೀಚರ್ ಫಿಲ್ಮ್‌ಗಳನ್ನು 75 ರೂ. ಪಾವತಿಸಿ ನೋಡಬಹುದಾಗಿದೆ. ಇನ್ನು 40 ನಿಮಿಷದ ಚಲನಚಿತ್ರಗಳು ಕೇವಲ 40 ರೂಪಾಯಿಗಳಿಗೆ ಮತ್ತು 30 ನಿಮಿಷಗಳ ಚಲನಚಿತ್ರಗಳನ್ನ 30 ರೂಪಾಯಿಗಳಿಗೆ ಹಾಗೂ 20 ನಿಮಿಷಗಳ ಚಲನಚಿತ್ರಗಳನ್ನು ಜಸ್ಟ್ 20 ರೂಪಾಯಿ ಪಾವತಿಸಿ ನಿಮ್ಮಿಷ್ಟದ ವಿಡಿಯೋಗಳನ್ನ ನೋಡಬಹುದಾಗಿದೆ.