ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿಂದು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಇಂದು ದೆಹಲಿ ಅಭಿವೃದ್ಧಿಗೆ ಅತ್ಯಂತ ಮಹತ್ವದ ದಿನ. ಈ ಯೋಜನೆಗಳು ಮುಂದಿನ ಪೀಳಿಗೆಯನ್ನು ಜ್ಞಾನ, ಅವಿಷ್ಕಾರ ಮತ್ತು ಅವಕಾಶಗಳ ಮೂಲಕ ಸಬಲಗೊಳಿಸಿ, ಪೋಷಿಸಲಿವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ" ಎಂದು ತಿಳಿಸಿದ್ದಾರೆ.
"ಭಾರತದ ಪ್ರತಿಯೊಬ್ಬರಿಗೂ ಸೂಕ್ತ ಮನೆ ನೀಡುವ ಭರವಸೆಗೆ ನಾವು ಬದ್ಧ. ಇಂದು ಕೊಳೆಗೇರಿ ಪುನರ್ವಸತಿ ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ 1,675 ಫ್ಲಾಟ್‌ಗಳನ್ನು ಉದ್ಘಾಟಿಸಲಾಗುವುದು. ಈ ಮೂಲಕ ಜನರಿಗೆ ಉತ್ತಮ ಮತ್ತು ಆರೋಗ್ಯಯುತ ನಿವಾಸದ ಭರವಸೆ ನೀಡುತ್ತಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ಸರ್ಕಾರಿ ಉದ್ಯೋಗಿಗಳಿಗೆ ಸರೋಜಿನಿ ನಗರ್‌ನಲ್ಲಿ ಹೊಸ ಟೈಪ್ 2 ಕ್ವಾರ್ಟ್ರಸ್ ಪ್ರಯೋಜನಕಾರಿಯಾಗಿದೆ" ಎಂದರು.