ಹೈದರಾಬಾದ್:ಪ್ರೀತಿ ಕುರುಡು ಎನ್ನುವ ಮಾತು ಅನೇಕರ ವಿಷಯದಲ್ಲಿ ನಿಜವಾಗುತ್ತದೆ. ಲಂಡನ್ನಲ್ಲಿ ಸುಂದರ ಸಂಸಾರದೊಂದಿಗೆ ಜೀವನ ಮಾಡುತ್ತಿದ್ದ ಮಹಿಳೆಯೊಬ್ಬಳು ಇದೀಗ ಪ್ರಿಯತಮನಿಗಾಗಿ ಅವರನ್ನು ತೊರೆದು ಭಾರತಕ್ಕೆ ಬಂದಿರುವ ಘಟನೆ ವರದಿಯಾಗಿದೆ. ಹೈದರಾಬಾದ್ನ ಪ್ರಿಯತಮನಿಗಾಗಿ 17 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾದ ಮಹಿಳೆ ವಿರುದ್ದ ಗಂಡ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿ, ಲಂಡನ್ಗೆ ವಾಪಸ್ ಕಳುಹಿಸಿದ್ದಾರೆ.
ಏನಿದು ಘಟನೆ?: ಮೂಲತಃ ಹೈದರಾಬಾದ್ನ ಅಲ್ವಾಲ್ ಮೂಲದ ಮಹಿಳೆ 17 ವರ್ಷದ ಹಿಂದೆ ಮದುವೆಯಾಗಿ ಲಂಡನ್ನಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ಸುಂದರವಾದ ಜೀವನ ನಡೆಸುತ್ತಿದ್ದರು. ಈ ಸುಂದರ ಜೀವನಕ್ಕೆ ಸಮಸ್ಯೆ ಎದುರಾಗಿದೆ. ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಮಹಿಳೆ ಹೈದರಾಬಾದ್ಗೆ ಆಗಮಿಸಿದ್ದರು. ಈವೇಳೆ ಆಕೆ ಆನ್ಲೈನ್ ಮೂಲಕ ಟಾಕ್ಸಿ ಬಾಡಿಗೆ ಪಡೆದಿದ್ದರು. ಈ ಟಾಕ್ಸಿ ಚಾಲಕ ಶಿವ ಜೊತೆಗೆ ಸಲುಗೆ ಬೆಳೆದು ನಂಬರ್ ವಿನಿಮಯ ಮಾಡಿಕೊಂಡಿದ್ದರು. ಈ ಪರಿಚಯ ನಿತ್ಯ ಮಾತನಾಡುವ ಹಂತಕ್ಕೆ ಹೋಯಿತು. ಮುಂದೆ ಈ ಮಾತುಕತೆ ಮಹಿಳೆಗೆ ಚಾಲಕನ ಮೇಲೆ ಮೋಹಕ್ಕೂ ಕಾರಣವಾಗಿದೆ.
ಈ ನಡುವೆ ಕಳೆದ ತಿಂಗಳು ಸೆಪ್ಟೆಂಬರ್ 16ರಂದು ಮಹಿಳೆಯ ಅತ್ತೆ ಅಂದರೆ ಗಂಡನ ತಾಯಿ ಮೃತಪಟ್ಟಿದ್ದರು. ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಗಂಡ ಹೈದರಾಬಾದ್ಗೆ ತೆರಳಿದಾಗ ಈಕೆ ಇಬ್ಬರು ಮಕ್ಕಳನ್ನು ಅಲ್ಲಿಯೇ ಬಿಟ್ಟು, ರಹಸ್ಯವಾಗಿ ಹೈದರಾಬಾದ್ಗೆ ಆಗಮಿಸಿ, ಸೆಪ್ಟೆಂಬರ್ 30ರಂದು ಶಿವನ ಹುಟ್ಟು ಹಬ್ಬ ಆಚರಿಸಿದ್ದರಂತೆ.