ನವದೆಹಲಿ:ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು 1991ರ ಕೇಂದ್ರ ಬಜೆಟ್ಗೆ ಅಂಗೀಕಾರ ಪಡೆಯಲು ಭಾರಿ ಕಸರತ್ತನ್ನೇ ಮಾಡಬೇಕಾಯಿತು. ಅವರು ಅಂದು ತೆಗೆದುಕೊಂಡ ಹಾಗೂ ಎದುರಿಸಿದ ಸವಾಲುಗಳು ನೂರಾರು. ಅಕ್ಷರಶಃ ಪ್ರಯೋಗ ಮಾಡಿ, ಟೀಕೆಗಳ ಸರಮಾಲೆಯನ್ನು ಎದುರಿಸಿ ಗೆದ್ದು ಬೀಗಿದರು. ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದರು.
ಪಿ ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಆಗ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದರು. ಸುಧಾರಣೆಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು.
1991 ರಲ್ಲಿ ಸಿಂಗ್ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು.
ಜುಲೈ 25, 1991ರಂದು ಕೇಂದ್ರ ಬಜೆಟ್ ಮಂಡನೆಯಾದ ಒಂದು ದಿನದ ನಂತರ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದರು. ತಮ್ಮ ಬಜೆಟ್‌ನ ಸಂದೇಶವನ್ನು ಸಮರ್ಥವಾಗಿ ಪತ್ರಕರ್ತರೆದರು ಮಂಡಿಸಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 'ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ' ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ನರಸಿಂಹ ರಾವ್ ಅವರು ಪ್ರಧಾನಿಯಾದ ನಂತರ ನಡೆದ ವೇಗದ ಬದಲಾವಣೆಗಳನ್ನು ತಮ್ಮ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ.
ಪತ್ರಕರ್ತರ ಬೆಂಕಿ ಉಂಡೆಯಂತಹ ಪ್ರಶ್ನೆಗಳಿಗೆ ಸಿಂಗ್ ಉತ್ತರ:ಬಜೆಟ್ ಮಂಡನೆಯ ಒಂದು ದಿನದ ನಂತರ ಪತ್ರಕರ್ತರನ್ನು ಎದುರಿಸಿದ ಮನಮೋಹನ್ ಸಿಂಗ್, ತಮ್ಮ ಬಜೆಟ್ ಬಗ್ಗೆ ಎಳೆ ಎಳೆಯಾಗಿ ದೇಶದ ಮುಂದಿಟ್ಟರು, ತಮ್ಮ ನೀತಿ - ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಇದೊಂದು 'ಮಾನವೀಯ ಮುಖವುಳ್ಳ ಬಜೆಟ್' ಎಂದು ಬಣ್ಣಿಸಿದರು. ಅವರು ರಸಗೊಬ್ಬರ, ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾವನೆಗಳನ್ನು ಜೋಪಾನವಾಗಿ ಸಮರ್ಥಿಸಿಕೊಂಡರು ಎಂದು ಜೈರಾಂ ರಮೇಶ್ 2015 ರಲ್ಲಿ ಪ್ರಕಟವಾದ ತಮ್ಮ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಅಂದಿನ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ನಡೆದಿದ್ದೇನು?:ಕಾಂಗ್ರೆಸ್ ಶ್ರೇಯಾಂಕಗಳಲ್ಲಿನ ಅಸಮಾಧಾನ ಗ್ರಹಿಸಿದ ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಆಗಸ್ಟ್ 1, 1991 ರಂದು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಸಭೆ ಕರೆದಿದ್ದರು. ಪಕ್ಷದ ಸಂಸದರು "ತಮ್ಮ ಮನದಾಳ, ಅಸಮಾಧಾನಗಳನ್ನು ಹೊರ ಹಾಕಲು ಮುಕ್ತ ಅವಕಾಶ ನೀಡಲು ನಿರ್ಧರಿಸಿದರು.