ಔರಂಗಾಬಾದ್, ಮಹಾರಾಷ್ಟ್ರ: ಕಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಆರು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಇಂದು ಸಂಭವಿಸಿದೆ.
ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಪುಣೆಗೆ ತೆರಳುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಅತ್ಯಂತ ವೇಗವಾಗಿ ಬರುತ್ತಿದ್ದ ಮದ್ಯದ ಅಮಲಿನಲ್ಲಿದ್ದ ಯುವಕನ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಂಬೆಜಲಗಾಂವ್ ಪ್ರದೇಶದ ಟೋಲ್ ಬೂತ್ ಬಳಿ ಅಪಘಾತ ಸಂಭವಿಸಿದೆ. ಅಮರಾವತಿ ಮೂಲದ ಮೃಣಾಲಿನಿ ಅಜಯ್ ಬೇಸರ್ಕರ್ (38), ಆಶಾಲತಾ ಪೋಪಲ್‌ಘೋಟೆ (65), ದುರ್ಗಾ ಸಾಗರ್ ಗೀತೆ (7) ಮತ್ತು ಆರು ತಿಂಗಳ ಮಗು ಸಾವನ್ನಪ್ಪಿದವರು. ಅಜಯ್ ಅಂಬಾದಾಸ್ ಬೆಸರ್ಕರ್ ಮತ್ತು ಶುಭಾಂಗಿನಿ ಸಾಗರ್ ಗಿಲೆ (36) ತೀವ್ರವಾಗಿ ಗಾಯಗೊಂಡಿದ್ದಾರೆ.