ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಸರಳೀಕರಿಸಲಾಗಿದೆ. ಇದು ಸಾಮಾನ್ಯ ಜನರ ಮೇಲಿನ ಹೊರೆಯನ್ನು ಮಾಡಲಿದೆ. ವ್ಯಾಪಾರ, ಉದ್ಯಮಿದಲ್ಲಿ ಲಾಜಿಸ್ಟಿಕ್ಸ್ ಮತ್ತು ಅನುಸರಣೆ ವೆಚ್ಚವನ್ನು ಕಡಿತ ಮಾಡಲಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದರ ಜೊತೆಗೆ, ಉಳಿದ ವಲಯಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುವುದು ಎಂದೂ ಕೇಂದ್ರ ಸರ್ಕಾರ ಹೇಳಿದೆ.
ಜಿಎಸ್‌ಟಿ ಅಡಿಯಲ್ಲಿ ಬರುವ ಎಲ್ಲ ಪ್ರಮುಖ ತೆರಿಗೆದಾರರ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕಸ್ಟಮ್ಸ್ ಮತ್ತು ಆದಾಯ ತೆರಿಗೆಯನ್ನೂ ಆಧುನೀಕರಣಗೊಳಿಸಲಾಗಿದೆ. ಜಿಎಸ್‌ಟಿ ಸರಳೀಕರಣಗೊಳಿಸುವ ಪ್ರಯತ್ನ ಸಾಗುತ್ತಿದೆ. ಇದು ಅದರ ಮೊದಲ ಹೆಜ್ಜೆಯಾಗಿದೆ. ಜಿಎಸ್‌ಟಿಯ ಪ್ರಯೋಜನಗಳನ್ನು ಹೆಚ್ಚಿಸಲು, ನಾವು ತೆರಿಗೆ ರೂಪವನ್ನು ಇನ್ನಷ್ಟು ಸರಳೀಕರಿಸಲು ಮತ್ತು ತರ್ಕಬದ್ಧಗೊಳಿಸಲು ಪ್ರಯತ್ನಿಸುತ್ತೇವೆ. ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರದ ಉಳಿದ ಕ್ಷೇತ್ರಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದಾಖಲೆ ಮಟ್ಟದಲ್ಲಿ ಜಿಎಸ್‌ಟಿ ಸಂಗ್ರಹ: ಈ ವರ್ಷದ ಜೂನ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1.74 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಒಟ್ಟು ಜಿಎಸ್ಜಿ ಸಂಗ್ರಹವು 5.57 ಲಕ್ಷ ಕೋಟಿ ರೂಪಾಯಿ, 2023 ರ ಏಪ್ರಿಲ್ ತಿಂಗಳೊಂದರಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ 1.87 ಲಕ್ಷ ಕೋಟಿ ರೂಪಾಯಿ ಆಗಿತ್ತು ಎಂದು ಮೂಲಗಳು ತಿಳಿಸಿವೆ.