ತಿರುವನಂತಪುರಂ: ಉತ್ತಮವಾದ ಗಂಡು ಮಗು ಪಡೆಯುವುದು ಹೇಗೆ ಎಂಬ ಬಗ್ಗೆ ತಮ್ಮ ಅತ್ತೆ ಮತ್ತು ಗಂಡ ವಿವರವಾದ ಸೂಚನೆ ನೀಡಿದ ಹಿನ್ನೆಲೆ ರೋಸಿದ ಮಹಿಳೆಯೊಬ್ಬರು ಈ ಪ್ರಕರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೇರಳದ ಹೈಕೋರ್ಟ್ನಲ್ಲಿ ಈ ರೀತಿಯ ಒಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಪ್ರಕರಣ ಆಲಿಸಿದ ನ್ಯಾಯಾಲಯ ಆಘಾತ ವ್ಯಕ್ತಪಡಿಸಿದ್ದು, ಇಂದಿನ ದಿನವೂ ಈ ರೀತಿ ಆಗಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸಿದೆ.
ಅರ್ಜಿ ಸಲ್ಲಿಸಿದ ಮಹಿಳೆ, ಗಂಡ ಮತ್ತು ಅತ್ತೆ ಉತ್ತಮ ಗಂಡು ಮಗುವನ್ನು ಹೆರುವಂತೆ ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಈ ಕುರಿತು ಸ್ಪಷ್ಟ ಸೂಚನೆ ನೀಡಿ, ಆ ಸೂಚನೆ ಹೇಗೆ ಪಾಲಿಸಬೇಕು ಎಂದು ಕೂಡ ಹೇಳುತ್ತಿದ್ದರು ಎಂದು ದೂರಿದ್ದಾರೆ.
ಮದುವೆಯಾದಾಗಿನಿಂದಲೂ ಉತ್ತಮ ಗಂಡು ಮಗು ಹೇಗೆ ಹೇರಬೇಕು ಎಂದು ಕೈ ಬರಹದ ಪಟ್ಟಿಯನ್ನು ನೀಡಿದ್ದರು. ಆದರೆ ಹೆಣ್ಣು ಮಗುವಿನ ಜನ್ಮದ ಬಳಿಕ ಈ ಸಮಸ್ಯೆ ಹೆಚ್ಚಾಯ್ತು ಎಂದು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ತಮ್ಮ ಗಂಡನ ಮನೆಯವರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದು, ಕಡೆಗೆ ಕೋರ್ಟ್ ಮೆಟ್ಟಿಲೇರಿದ್ದಾಗಿ ತಿಳಿಸಿದ್ದಾರೆ.
ಪ್ರಕರಣ ಆಲಿಸಿದ ನ್ಯಾ. ದೆವನ್ ರಾಮಚಂದ್ರನ್, ಇಂದಿನ ಕಾಲದಲ್ಲಿ ರಾಜ್ಯದಲ್ಲಿ ಈ ರೀತಿಯ ಪ್ರಕರಣ ದಾಖಲಾಗಿರುವುದು ಶಾಕಿಂಗ್ ಆಗಿದೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಪತಿ ಮತ್ತು ಅವರ ಕುಟುಂಬದ ಕ್ರಮಗಳು ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಗಂಡನ ಮನೆಯವರ ಸೂಚನೆ ಕಾನೂನುಬಾಹಿರವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಕಾಯಿದೆಯ ಸೆಕ್ಷನ್ 22 ಪ್ರಸವಪೂರ್ವ ಲಿಂಗ ನಿರ್ಣಯಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ನಿಷೇಧವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸುತ್ತಿರುವ ಹಿನ್ನೆಲೆ ತಮ್ಮ ಗಂಡ ಮತ್ತು ಮನೆಯವರ ವಿರುದ್ಧ ಕ್ರಮ ಜರುಗಿಸುವಂತೆ ಪಿಸಿ ಮತ್ತು ಪಿಎನ್‌ಡಿಟಿ ನಿರ್ದೇಶಕರಿಗೆ ಮಹಿಳೆ ಪತ್ರ ಬರೆದಿದ್ದಾರೆ. ಆದರೆ, ಅವರು ಇದನ್ನು ನಿರ್ಲಕ್ಷ್ಯಿಸಿದ್ದು, ಈ ಸಂಬಂಧ ಕೋರ್ಟ್, ರಾಜ್ಯ ಮತ್ತು ಕೇಂದ್ರದ ಪಿಸಿ, ಪಿಎನ್‌ಡಿಟಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಲಾಗಿದೆ.
ಅರ್ಜಿ ಸಲ್ಲಿಸಿದ ಮಹಿಳೆ ಕೊಲ್ಲಂನವರಾಗಿದ್ದು, 2012ರಲ್ಲಿ ಮದುವೆಯಾಗಿದ್ದು, 2014ರಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ತಂದೆಗೆ ಯಕೃತ್ ದಾನಕ್ಕೆ ಮುಂದಾದ ಅಪ್ರಾಪ್ತ ಪುತ್ರಿ: ಕೇರಳ ಹೈ ಕೋರ್ಟ್ನಿಂದ ಹಸಿರು ನಿಶಾನೆ