ನಂಗಲ್ (ಪಂಜಾಬ್) :ಇಲ್ಲಿನ ಬಾಬಾ ಉಡೋದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಟ್ಲೆಜ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮಹಿಳೆ ಜಾರಿಬಿದ್ದು ಸಾವನ್ನಪ್ಪಿದ್ದು, ಅವರ ಒಂದೂವರೆ ವರ್ಷದ ಮಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ಒಂದು ಕುಟುಂಬದ ಗಂಡ - ಹೆಂಡತಿ ತನ್ನ ಇಬ್ಬರು ಮಕ್ಕಳೊಂದಿಗೆ ನಂಗಲ್ ಅಣೆಕಟ್ಟಿನ ಬಳಿಯ ಸಟ್ಲೆಜ್ ನದಿಯ ದಡದಲ್ಲಿರುವ ಬಾಬಾ ಉಡೋ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಈ ಕುಟುಂಬದ ಒಬ್ಬ ಹುಡುಗಿಗೆ ಒಂದೂವರೆ ವರ್ಷ ಮತ್ತು ಇನ್ನೊಬ್ಬಳಿಗೆ ನಾಲ್ಕು ವರ್ಷ ಎಂದು ತಿಳಿದುಬಂದಿದೆ.
ನದಿಯಲ್ಲಿ ಕೊಚ್ಚಿ ಹೋದ ಬಾಲಕಿ : ಕುಟುಂಬ ಸಮೇತರಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಟ್ಲೆಜ್ ನದಿಯಲ್ಲಿ ಸ್ನಾನ ಮಾಡಿ ಒಂದೂವರೆ ವರ್ಷದ ಮಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಬಾಲಕಿಯ ತಾಯಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ವೇಳೆ ಬಾಲಕಿ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಆಗ ಒಂದೂವರೆ ವರ್ಷದ ಮಗಳನ್ನು ರಕ್ಷಿಸಲು ತಂದೆ ಕೂಡ ನೀರಿಗೆ ಧುಮುಕಿದ್ದಾರೆ. ಆದರೆ ಅವರಿಂದ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಹಿಮಾಚಲದಿಂದ ಬಂದಿರುವ ಕುಟುಂಬ :ಈ ಘಟನೆಯ ನಂತರ ಕುಟುಂಬವು ಮುಳುಗು ತಂಡವನ್ನು ಕರೆದಿದೆ. ಅವರು ಬಹಳ ಹೊತ್ತು ನೀರಿನಲ್ಲಿ ಹುಡುಕಲು ಯತ್ನಿಸಿದರೂ ಸಹ ಕೊನೆಗೆ ವಿಫಲರಾಗಿದ್ದಾರೆ. ಕತ್ತಲೆ ಕವಿದಿದ್ದರಿಂದ ಮುಳುಗು ತಜ್ಞರು ತಮ್ಮ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿದ್ದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೃತರ ಕುಟುಂಬಸ್ಥರು, ತಾವು ಹಿಮಾಚಲ ಪ್ರದೇಶದ ನೈನಾ ದೇವಿ ತಾಲೂಕಿನ ಪಲಸಾದ್ ಗ್ರಾಮದ ನಿವಾಸಿಗಳು, ಕೆಲಸದ ನಿಮಿತ್ತ ತಮ್ಮ ಕುಟುಂಬವು ಶೋಲಾಕ್ ಅವೆನ್ಯೂ ಕಾಲೋನಿ ನಂಗಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಈ ನಡುವೆ ಅವಘಡ ಸಂಭವಿಸಿದೆ ಎಂದು ಹೇಳಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು : ಅಲ್ಲಿ ಮನೆಯವರು ನವನಗಲ್ ಠಾಣೆಗೆ ತೆರಳಿ ಇಡೀ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಪೊಲೀಸರು ಮನೆಯವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಾಲಕಿಯ ನೆರವಿನಿಂದ ಹುಡುಕಾಟ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಬಾಲಕಿಯ ಅಂತಿಮ ಸಂಸ್ಕಾರವನ್ನು ನಾವು ನೆರವೇರಿಸಬೇಕಿದೆ. ಹೀಗಾಗಿ ಮುಳುಗು ತಂಡದವರು ತಮ್ಮ ಮಗಳನ್ನು ಪತ್ತೆ ಮಾಡಿ ನಮಗೆ ಒಪ್ಪಿಸಲಿ ಎಂದು ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ವ್ಯಕ್ತಿ ಹೊರಗೆ ಎಳೆಯಲು ಯತ್ನ: ನಿದ್ರೆಯಿಂದ ತಟ್ಟನೆ ಎಚ್ಚರಗೊಂಡ ವ್ಯಕ್ತಿ ಕಂಡು ಪೊಲೀಸರು ಶಾಕ್! - Man Drowned In Water