ಕರ್ನಾಟಕ

karnataka

ETV Bharat / bharat

ಹೊಸ ಕ್ರಿಮಿನಲ್​ ಕಾನೂನಗಳಡಿ ಯುಪಿಯಲ್ಲಿ ಮೊದಲ ಪ್ರಕರಣ ದಾಖಲು - New Criminal Law - NEW CRIMINAL LAW

ಹೊಸ ಕಾನೂನಿನ ಪ್ರಕಾರ, ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ರಾಹ್ರಾ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ನರಹತ್ಯೆ ಅಥವಾ ಕೊಲೆ ಪ್ರಕರಣದಲ್ಲಿ ನಮೂದಾಗಿದೆ. ಪೊಲೀಸರು ಹೊಸ ಕಾನೂನು ಬಿಎನ್‌ಎಸ್‌ನ ಸೆಕ್ಷನ್ 106 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

BNS FIRST FIR  WHAT IS BNS  WHAT IS IPC  UP CRIME NEWS
ಹೊಸ ಕ್ರಿಮಿನಲ್​ ಕಾನೂನಗಳಡಿ ಮೊದಲ ಪ್ರಕರಣ ದಾಖಲು (ETV Bharat)

By ETV Bharat Karnataka Team

Published : Jul 1, 2024, 3:53 PM IST

ಲಖನೌ (ಉತ್ತರಪ್ರದೇಶ): ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಇಂದಿನಿಂದ ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಗೆ ಬಂದ ತಕ್ಷಣ, ಅದರ ಅಡಿಯಲ್ಲಿ ಯುಪಿಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಹೊಸ ಕಾನೂನಿನ ಪ್ರಕಾರ, ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ರಾಹ್ರಾ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಅನ್ನು ಅಪರಾಧಿ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಹೊಸ ಕಾನೂನು ಬಿಎನ್‌ಎಸ್‌ನ ಸೆಕ್ಷನ್ 106 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಸಂಜಯ್ ಸಿಂಗ್ ಸುಶೀಲ್ ಕುಮಾರ್ ಅವರು ಅಮ್ರೋಹಾದ ರಾಹ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದೂರಿನ ಪ್ರಕಾರ ಪಿರ್ಯಾದಿದಾರರ ತಂದೆ ಜಗಪಾಲ್ ಅವರು ಸೋಮವಾರ ಬೆಳಗ್ಗೆ ತಮ್ಮ ಹೊಲಕ್ಕೆ ಭತ್ತದ ಸಸಿ ನಾಟಿ ಮಾಡಲು ಹೋಗಿದ್ದರು. ಇವರ ಜಮೀನಿನ ಪಕ್ಕದಲ್ಲಿ ಅದೇ ಗ್ರಾಮದ ನಿವಾಸಿ ರಾಜವೀರ್ ಎಂಬುವರ ತೋಟವಿದ್ದು, ಅದರಲ್ಲಿ ವಿದ್ಯುತ್ ತಂತಿ ಅಳವಡಿಸಿದ್ದು, ವಿದ್ಯುತ್ ಸ್ಪರ್ಶದಿಂದ ಜಗಪಾಲ್ ಸಾವನ್ನಪ್ಪಿದ್ದಾರೆ. ಇದರ ನಂತರ, ಪೊಲೀಸರು ರಾಜ್‌ವೀರ್ ಮತ್ತು ಅವರ ಮಗ ಭೂಪ್ ವಿರುದ್ಧ BNS ಸೆಕ್ಷನ್ 106 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿಂದೆ ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಇದೊಂದು ನಿರ್ದಾಕ್ಷಿಣ್ಯ ಕೊಲೆ ಪ್ರಕರಣವಾಗಿದೆ.

ಸೋಮವಾರದಿಂದ (ಜುಲೈ 1) ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿವೆ. ಇದು ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತಂದಿದೆ. ಈ ಮೂಲಕ ವಸಾಹತುಶಾಹಿ ಯುಗದ ಕಾನೂನುಗಳನ್ನು ಕೊನೆಗೊಳಿಸಿದಂತಾಗಿದೆ. ಭಾರತೀಯ ನ್ಯಾಯಾಂಗ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಕ್ರಮವಾಗಿ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಸ್ಥಾನವನ್ನು ಪಡೆದಿವೆ.

ಓದಿ:ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ರಾಜ್ಯ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ: ಡಿಜಿ & ಐಜಿಪಿ - New Criminal Laws

ABOUT THE AUTHOR

...view details