ರಾಯಪುರ (ಛತ್ತೀಸ್‌ಗಢದ):ರಾಜಧಾನಿ ರಾಯಪುರದಲ್ಲಿ ಸಾರನಾಥ್ ಎಕ್ಸ್‌ಪ್ರೆಸ್ ರೈಲಿನೊಳಗೆ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ದುರಂತವೊಂದು ಸಂಭವಿಸಿದೆ. ಈ ಗುಂಡು ಆರ್‌ಪಿಎಸ್‌ಎಫ್ ಯೋಧನಿಗೆ ತಗುಲಿದ್ದರಿಂದ ಅವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯೋಧ ಮೃತಪಟ್ಟಿದ್ದರು.
ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು: ಇಂದು (ಶನಿವಾರ) ಬೆಳಗ್ಗೆ 6 ಗಂಟೆಗೆ ಗುಂಡಿನ ಸದ್ದು ಕೇಳಿದೆ. ಉಸ್ಲಾಪುರದಿಂದ ರಾಯಪುರಕ್ಕೆ ಹೋಗುವ ರೈಲು ಸಂಖ್ಯೆ 15159 ಸಾರನಾಥ ಎಕ್ಸ್‌ಪ್ರೆಸ್ ರೈಲಿನೊಳಗೆ RPSF ಸಿಬ್ಬಂದಿ ಪರಿಶೀಲಿಸುತ್ತಿದ್ದರು. ರೈಲು ರಾಯ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ತಲುಪಿದಾಗ, RPSF ಯೋಧ ದಿನೇಶ್ ಚಂದ್ರ ರೈಲಿನ ಕೋಚ್ ಸಂಖ್ಯೆ S/02 ನಿಂದ ಇಳಿಯುತ್ತಿದ್ದರು. ಆಗ ಅವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿತು. ಗುಂಡು ಹಾರಿಸಿದ್ದರಿಂದ ದಿನೇಶ್ ಚಂದ್ರ ಅವರ ಎದೆಗೆ ಗುಂಡು ತಗುಲಿದೆ. ಕೋಚ್‌ನಲ್ಲಿ ಮೇಲಿನ ಸೀಟ್ನಲ್ಲಿ ಮಲಗಿದ್ದ ಪ್ರಯಾಣಿಕ ಮೊಹಮ್ಮದ್ ಡ್ಯಾನಿಸ್‌ಗೂ ಗುಂಡು ತಗುಲಿದೆ. ಘಟನೆಯ ನಂತರ ಈ ರೈಲಿನೊಳಗೆ ಆತಂಕ ಮನೆ ಮಾಡಿತ್ತು.
ರೈಲ್ವೆ ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭ: ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆಯ ಬಳಿಕ, ಆರ್‌ಪಿಎಫ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದರು. ಗಾಯಗೊಂಡ ಪ್ರಯಾಣಿಕರನ್ನು ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಯೋಧ ದಿನೇಶ್ ಚಂದ್ರ ಸಾವನ್ನಪ್ಪಿದ್ದಾರೆ. ಗಾಯಾಳು ಪ್ರಯಾಣಿಕನಿಗೆ ಚಿಕಿತ್ಸೆ ಮುಂದುವರಿದಿದೆ.