ಸರನ್ (ಬಿಹಾರ):ಬಿಹಾರದ ಸರನ್ನಲ್ಲಿ ವೈದ್ಯೆಯೊಬ್ಬರು ವಾರ್ಡ್ ಕೌನ್ಸಿಲರ್ ಆಗಿರುವ ತನ್ನ ಪ್ರಿಯಕರ ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಆರೋಪಿಸಿ ವಿಚಿತ್ರ ಶಿಕ್ಷೆಯನ್ನು ನೀಡಿದ್ದಾರೆ. ವೈದ್ಯೆಗೆ ಪ್ರಿಯಕರ ಬಹಳದಿನಗಳಿಂದಲೂ ಮದುವೆಯಾಗುವುದಾಗಿ ಭರವಸೆ ನೀಡುತ್ತಲೇ ಬಂದಿದ್ದರು. ಆದರೆ ಇಂದು ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವೈದ್ಯೆ ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ.
ಆರೋಪಿಯ ಬಂಧನ: ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ನಾನು ನಿನಗಾಗಿ ನನ್ನ ಮನೆ ಸೇರಿದಂತೆ ಎಲ್ಲವನ್ನೂ ಬಿಟ್ಟೆ. ಆದ್ರೆ ನೀನು ಮಾತ್ರ ಸಿಗಲಿಲ್ಲ ಎಂದು ವೈದ್ಯೆ ಹೇಳಿದರು. ಆರೋಪಿ ವೈದ್ಯೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮಧುರಾ ಪೊಲೀಸ್ ಠಾಣೆಯ ಪೊಲೀಸರು ಮಹಿಳಾ ವೈದ್ಯೆಯ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪ್ರತಿ ಗಲ್ಲಿಗಲ್ಲಿಯಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿದೆ.
ಪಿಎಂಸಿಹೆಚ್ ಶಿಫಾರಸು: ಸರನ್ ಜಿಲ್ಲೆಯ ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾಹಿತಿ ಪಡೆದ ಮಧುರಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಗಾಯಗೊಂಡ ವಾರ್ಡ್ ಕೌನ್ಸಿಲರ್ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಮಲಗಿದ್ದರು. ಪೊಲೀಸರು ಗಾಯಗೊಂಡ ವಾರ್ಡ್ ಕೌನ್ಸಿಲರ್ ಅನ್ನು ಮರ್ಹೌರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಚಾಪ್ರಾಕ್ಕೆ ಕಳುಹಿಸಿದರು. ಪರೀಕ್ಷೆಯ ನಂತರ, ಚಪ್ರಾದಲ್ಲಿನ ವೈದ್ಯರು ವಾರ್ಡ್ ಕೌನ್ಸಿಲರ್ ಅನ್ನು ಉತ್ತಮ ಚಿಕಿತ್ಸೆಗಾಗಿ PMCH ಗೆ ಶಿಫಾರಸು ಮಾಡಿದರು.