ಮೇದಕ್(ತೆಲಂಗಾಣ):ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸೆಲ್ ಫೋನ್ ಕಾಣಸಿಗುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಒಂದೆಡೆ ಸಾಮಾಜಿಕ ಜಾಲತಾಣಗಳು, ಮತ್ತೊಂದೆಡೆ ಆನ್‌ಲೈನ್ ಗೇಮ್‌ಗಳಲ್ಲಿ ತೊಡಗಿ ಮಧ್ಯರಾತ್ರಿ ಕಳೆದರೂ ಮಕ್ಕಳು ನಿದ್ದೆ ಮಾಡದೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಆನ್‌ಲೈನ್ ಗೇಮ್‌ಗಳಿಗಾಗಿ ಕೆಲವರು ಕೋಟಿ-ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಎಲ್ಲೋ ಹೋಗುತ್ತಿದ್ದ ಈ ಬೆಟ್ಟಿಂಗ್ ದಂಧೆ ಇದೀಗ ಯೂಟ್ಯೂಬ್ ಚಾನೆಲ್, ವೆಬ್ಸೈಟ್ಗಳ ಮೂಲಕ ಮಾತ್ರವಲ್ಲದೆ ಮೊಬೈಲ್ ಆ್ಯಪ್ಗಳ ರೂಪದಲ್ಲೂ ಅಮಾಯಕರ ಜೇಬು ಲೂಟಿ ಮಾಡುತ್ತಿವೆ.
ಆನ್‌ಲೈನ್ ಬೆಟ್ಟಿಂಗ್‌ನಿಂದ ಪ್ರಾಣಹಾನಿ: ಜೂಜಿನ ಚಟಕ್ಕೆ ಬಿದ್ದಿರುವ ಜನರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಂತ್ರಸ್ತ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ನೊಂದ ಕೆಲವರು ಆತ್ಮಹತ್ಯೆಗೆ ಶರಣಾಗಿ ಅರ್ಧದಲ್ಲೇ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಿದ್ದಾರೆ. ಇನ್ನು ಕೆಲವು ಘಟನೆಗಳಲ್ಲಿ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಕ್ಕಳಿಗೆ ಪಾಲಕರು ಛೀಮಾರಿ ಹಾಕುತ್ತಿದ್ದಾರೆ. ಈ ಕ್ರಮದಲ್ಲಿ ಎಷ್ಟು ಹೇಳಿದರೂ ಕೇಳದ ಕಾರಣ ಕ್ಷಣ ಮಾತ್ರದಲ್ಲಿ ಪ್ರಾಣ ತೆಗೆಯುವ ಘಟನೆಗಳೂ ನಡೆಯುತ್ತಿವೆ.
ಇತ್ತೀಚೆಗೆ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಗನಿಗೆ ತಂದೆ ಥಳಿಸಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿನ್ನಶಂಕರಂಪೇಟೆ ತಾಲೂಕಿನ ಭಗೀರಥಪಲ್ಲಿ ಮೂಲದ ಮುಖೇಶ್ ಕುಮಾರ್ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋಜಿಗಾಗಿ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಸುಮಾರು 2 ಕೋಟಿ ರೂ.ವರೆಗೂ ಹಣ ಕಳೆದುಕೊಂಡಿದ್ದಾರೆ.