ಕರ್ನಾಟಕ

karnataka

ETV Bharat / bharat

ರಸ್ತೆ ಅಪಘಾತ : ಖ್ಯಾತ ಶೂಟರ್ ಮನು ಭಾಕರ್ ಅಜ್ಜಿ- ಚಿಕ್ಕಪ್ಪ ಸಾವು - MANU BHAKER GRANDMOTHER UNCLE DIED

ಖ್ಯಾತ ಶೂಟರ್ ಮನು ಭಾಕರ್ ಅವರ ಅಜ್ಜಿ ಮತ್ತು ಚಿಕ್ಕಪ್ಪ ಇಂದು ಚಾರ್ಖಿ ದಾದ್ರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

road-accident
ರಸ್ತೆ ಅಪಘಾತ (IANS)

By ETV Bharat Karnataka Team

Published : Jan 19, 2025, 1:53 PM IST

Updated : Jan 19, 2025, 2:12 PM IST

ಚಾರ್ಖಿ ದಾದ್ರಿ (ಹರಿಯಾಣ) : ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರ ಅಜ್ಜಿ ಮತ್ತು ಚಿಕ್ಕಪ್ಪ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮನು ಭಾಕರ್ ಅವರ ಚಿಕ್ಕಪ್ಪ ಯದ್ವೀರ್ ಸಿಂಗ್ ಹಾಗೂ ಅಜ್ಜಿ ಸಾವಿತ್ರಿ ದೇವಿ ಸ್ಕೂಟರ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಚಾರ್ಖಿ ದಾದ್ರಿಯ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟರ್‌ಗೆ ಎದುರಿನಿಂದ ಬಂದ ವಾಹನವೊಂದು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಮನು ಭಾಕರ್ ಅವರಿಗೆ ರಾಷ್ಟ್ರಪತಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಇದನ್ನೂ ಓದಿ :ಪೊಲೀಸ್​​​​​​​ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಐವರ ಮೇಲೆ ಹರಿದ ಬಸ್​: ಮೂವರ ದುರ್ಮರಣ - ST BUS HIT 5 PEOPLE

Last Updated : Jan 19, 2025, 2:12 PM IST

ABOUT THE AUTHOR

...view details