ಜೌನಪುರ, ಉತ್ತರಪ್ರದೇಶ: ಮಹಾಕುಂಭದ ವಿಶೇಷ ರೈಲಿನ ಬೋಗಿಗೆ ಎಂಜಿನ್ ಜೋಡಿಸುವ ವೇಳೆ ಹಳಿ ತಪ್ಪಿರುವ ಘಟನೆ ಜೌನ್‌ಪುರ ಜಂಕ್ಷನ್‌ನಲ್ಲಿ ನಡೆದಿದೆ. ಜೌನಪುರ ಜಂಕ್ಷನ್‌ನ ಮೂರನೇ ಫ್ಲಾಟ್ಫಾರ್ಮ್ನಲ್ಲಿ ನಡೆದ ಈ ಘಟನೆ ರೈಲ್ವೆ ನೌಕರರಲ್ಲಿ ಆತಂಕಕ್ಕೆ ಕಾರಣವಾಯಿತು. ಆದರೆ, ಅದೃಷ್ಟವಶಾತ್ ರೈಲು ಖಾಲಿ ಇದ್ದ ಕಾರಣ ಯಾವುದೆ ಅಹಿತಕರ ಘಟನೆ ನಡೆದಿಲ್ಲ.
ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆ ಸಂಚರಿಸುವ ವಿಶೇಷ ರೈಲನ್ನು ಜೌನಪುರ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ನಂಬರ್ ಮೂರರಲ್ಲಿ ಸಿದ್ಧಪಡಿಸಲಾಗುತ್ತಿತ್ತು. ನೌಕರರು ಜೋಡಣೆ ಕೆಲಸವನ್ನು ನಿರ್ವಹಿಸುತ್ತಿದ್ದರು. ಈ ವೇಳೆ, ರೈಲು ಹಿಂದಕ್ಕೆ ಮುಂದಕ್ಕೆ ಚಲಿಸುವಾಗ ಇಂಜಿನ್‌ನ ಎರಡು ಚಕ್ರಗಳು ಏಕಾಏಕಿ ಹಳಿಯಿಂದ ಹೊರಬಂದು, ನೌಕರರಲ್ಲಿ ಆತಂಕಕ್ಕೆ ಕಾರಣವಾಯ್ತು.
ಈ ಅಪಘಾತದ ಸಮಯದಲ್ಲಿ, ರೈಲು ಸಂಪೂರ್ಣವಾಗಿ ಖಾಲಿಯಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದೆ.