ನವದೆಹಲಿ:ಲೋಕಸಭೆ ಚುನಾವಣಾ ಫಲಿತಾಂಶದೊಂದಿಗೆ ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ವಿಧಾನಸಭೆ ಫಲಿತಾಂಶ ಪ್ರಕಟವಾಗಿದೆ. ಜೊತೆಗೆ ಕರ್ನಾಟಕದ ಸುರಪುರ ಸೇರಿ 22 ಕ್ಷೇತ್ರಗಳ ಉಪ ಚುನಾವಣೆಯ ರಿಸಲ್ಟ್ ಕೂಡ ಘೋಷಣೆಯಾಗಿದೆ.
ಆಂಧ್ರದಲ್ಲಿ ಯಾರಿಗೆ ಮುನ್ನಡೆ?, ಹಿನ್ನಡೆ?:ಆಂಧ ಪ್ರದೇಶದಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ದೊಡ್ಡ ಬಹುಮತವನ್ನೇ ಸಾಧಿಸಿದೆ. 175 ವಿಧಾನಸಭೆ ಕ್ಷೇತ್ರಗಳ ಪೈಕಿ ಟಿಡಿಪಿ 135 ಕ್ಷೇತ್ರಗಳಲ್ಲಿ ಗೆದ್ದಿದೆ. ಮಿತ್ರಪಕ್ಷಗಳಾದ ಜನಸೇನೆ 21 ಮತ್ತು ಬಿಜೆಪಿ 8 ಕಡೆ ಜಯಭೇರಿಯಾಗಿದೆ. ಮತ್ತೊಂದೆಡೆ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆದಿದೆ. ಈ ಮೂಲಕ ಟಿಡಿಪಿ ನೇತೃತ್ವದ ಮೈತ್ರಿ ಬಹುಮತ ಪಡೆದಿದ್ದು, ಸರ್ಕಾರ ರಚಿಸಲಿದೆ.
ಎನ್‌ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಟಿಡಿಪಿ 144 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಜನಸೇನೆ 21 ಕ್ಷೇತ್ರ ಹಾಗೂ ಬಿಜೆಪಿ 10 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಒಟ್ಟು 175 ವಿಧಾನಸಭೆ ಕ್ಷೇತ್ರಗಳು:
- ಟಿಡಿಪಿ - 135
- ವೈಎಸ್ಆರ್ ಕಾಂಗ್ರೆಸ್ - 11
- ಜನಸೇನಾ - 21
- ಬಿಜೆಪಿ - 08
- ಕಾಂಗ್ರೆಸ್ - 00
- ಇತರ - 00
ಒಡಿಶಾದಲ್ಲಿ ಯಾರಿಗೆ ಮುನ್ನಡೆ?, ಹಿನ್ನಡೆ?:ಒಡಿಶಾದಲ್ಲಿ ನವೀನ್ ಪಟ್ನಾಯತ್ ನೇತೃತ್ವದ ಆಡಳಿತಾರೂಢ ಬಿಜೆಡಿ ಸಹ ಮುಖಭಂಗ ಅನುಭವಿಸಿದೆ. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ನವೀನ್ ಪಟ್ನಾಯಕ್ ಹಿಂಜಿಲಿ ಗೆದ್ದು, ಕಾಂತಾಬಾಂಜಿಯಲ್ಲಿ ಸೋಲನುಭವಿಸಿದ್ದಾರೆ. ಬಿಜೆಪಿ 50 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಅಧಿಕಾರ ಕಳೆದುಕೊಂಡಿದೆ.