ಲಡಾಖ್: ಲೇಹ್‌ನಲ್ಲಿ ಇಂದು (ಮಂಗಳವಾರ) ಭೂಕಂಪ ಸಂಭವಿಸಿದೆ. ಭಾರತೀಯ ರಾಷ್ಟ್ರೀಯ ಭೂ ಗರ್ಭಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಜನವರಿ 30ರ ಬೆಳಿಗ್ಗೆ 5:39ಕ್ಕೆ ಲಡಾಖ್ನ ಲೇಹ್‌ನಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.
ಸುಖ ನಿದ್ರೆಯಲ್ಲಿದ್ದ ಜನ ಈ ಕಂಪನದಿಂದ ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ:ಚೀನಾದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ದೆಹಲಿಯಲ್ಲೂ ನಡುಗಿದ ಭೂಮಿ
ವಾರದ (ಮಂಗಳವಾರ) ಹಿಂದಷ್ಟೇ ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮುಂಜಾನೆ 7.1 ತೀವ್ರತೆಯ ಭೂಕಂಪವಾಗಿತ್ತು. ಅಕ್ಸು ಪ್ರಾಂತ್ಯದ ವುಶು ಕೌಂಟಿಯಲ್ಲಿ ಈ ಅನುಭವವಾಗಿದೆ. ಚೀನಾ ಭೂಕಂಪ ಸಂಪರ್ಕ ಕೇಂದ್ರ ಭೂಕಂಪವನ್ನು ಖಚಿತಪಡಿಸಿತ್ತು. ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರವು ಎಕ್ಸ್ ಮೂಲಕ, ಭೂಕಂಪದ ಕೇಂದ್ರಬಿಂದುವು 80 ಕಿ.ಮೀ ಆಳದಲ್ಲಿದೆ ಎಂದು ಹೇಳಿತ್ತು.