ನವದೆಹಲಿ:ಇಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಕೋರ್ಸ್‌ಗೆ ಎರಡನೇ ಹಂತದ ಪ್ರವೇಶದ ಹಿನ್ನೆಲೆಯಲ್ಲಿ ಕಾಲೇಜುಗಳು ಮತ್ತು ಕೋರ್ಸ್‌ಗಳ ಆದ್ಯತೆಗಳನ್ನು ಭರ್ತಿ ಮಾಡಲು ಕೊನೆಯ ದಿನವಾಗಿದೆ. CUET UG ಫಲಿತಾಂಶವನ್ನು ಪ್ರಕಟಿಸುವ ಮೊದಲು ಪ್ರವೇಶಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಾಮಾನ್ಯ ಸೀಟ್ ಹಂಚಿಕೆ ವ್ಯವಸ್ಥೆ (CSAS) ಪೋರ್ಟಲ್‌ನಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳು ಇಂದು 4:59 PM ರೊಳಗೆ ಆದ್ಯತೆಯ ಫಾರ್ಮ್‌ಗಳನ್ನು ಭರ್ತಿ ಮಾಡಬಹುದಾಗಿದೆ.
ಜುಲೈ 28 ರಂದು CUET ಯುಜಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ ನಂತರ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಗಸ್ಟ್ 1 ರಿಂದ ಎರಡನೇ ಹಂತದಲ್ಲಿ ಆದ್ಯತೆಗಳನ್ನು ಭರ್ತಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಅಡ್ಮಿಷನ್ ಬ್ರಾಂಚ್ ಮೊದಲ ಹಂತದಲ್ಲಿ ನೋಂದಾಯಿಸದವರಿಗೆ ಮೊದಲ ಮತ್ತು ಎರಡನೆಯ ಹಂತಗಳಲ್ಲಿ ಏಕಕಾಲದಲ್ಲಿ ಸೇರಲು ಅವರಿಗೆ ಅವಕಾಶ ನೀಡಲಾಗಿದೆ.
CUET ಅಂಕಗಳ ಆಧಾರದ ಮೇಲೆ 71,000 ಪದವಿಪೂರ್ವ ಸೀಟುಗಳಲ್ಲಿ ಪ್ರವೇಶಗಳು ನಡೆಯುತ್ತಿವೆ. ಇಲ್ಲಿಯವರೆಗೆ ಎರಡನೇ ಹಂತದಲ್ಲಿ, 3,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಪಟ್ಟಿಯಲ್ಲಿ ಪ್ರವೇಶಕ್ಕಾಗಿ ಕಾಲೇಜು ಮತ್ತು ಕೋರ್ಸ್ ಆದ್ಯತೆಗಳನ್ನು ಭರ್ತಿ ಮಾಡಿದ್ದಾರೆ. ಈ ಹಿಂದೆ CUET ಯುಜಿ ಪರೀಕ್ಷೆಗೆ ನೋಂದಾಯಿಸುವಾಗ ಸುಮಾರು 6,00,000 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ತಮ್ಮ ಮೊದಲ ಆದ್ಯತೆಯ ಭಾಗವಾಗಿ ದೆಹಲಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದರು. ಆರಂಭದಲ್ಲಿ ಆಗಸ್ಟ್ 1 ರಂದು ಪ್ರಾರಂಭವಾಗಬೇಕಿದ್ದ ಹೊಸ ಸೇಷನ್ ಅಕ್ರಮಗಳ ಆರೋಪದ ನಡುವೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅಂಕಗಳ ಪ್ರಕಟಣೆಯಲ್ಲಿ ವಿಳಂಬವಾದ ಕಾರಣ ಮುಂದೂಡಲ್ಪಟ್ಟಿತು.