ಕರ್ನಾಟಕ

karnataka

ETV Bharat / bharat

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಇಬ್ಬರು ಮಕ್ಕಳು ಸೇರಿ ಎಂಟು ಜನರ ಸಾವು - Car fell into ditch - CAR FELL INTO DITCH

ಕಾರು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಎಂಟು ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರಲ್ಲಿ ಐವರು ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ.

Driver lost control of car and fell into ditch: eight people including two children were killed
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಇಬ್ಬರು ಮಕ್ಕಳು ಸೇರಿ ಎಂಟು ಜನ ಸಾವು (ETV Bharat)

By ETV Bharat Karnataka Team

Published : Jul 27, 2024, 8:28 PM IST

ಅನಂತನಾಗ್​ (ಜಮ್ಮು ಮತ್ತು ಕಾಶ್ಮೀರ): ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿ ಎಂಟು ಜನ ಸಾವನ್ನಪ್ಪಿರುವ ಘಟನೆ ಇಂದು ದಕ್ಷಿಣ ಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಸಂಭವಿಸಿದೆ.

ಸದ್ಯದ ಮಾಹಿತಿಯ ಪ್ರಕಾರ, ಜುಮಾನ್ ಪ್ರಾಂತ್ಯದ ಕಿಶ್ತ್ವಾರ್ ಜಿಲ್ಲೆಯಿಂದ ಕಾಶ್ಮೀರ ಕಣಿವೆ ಕಡೆಗೆ ಬರುತ್ತಿದ್ದ JK03H9017 ನೋಂದಣಿ ಸಂಖ್ಯೆಯ ಖಾಸಗಿ ಕಾರು ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶಕ್ಕೆ ತಲುಪುತ್ತಿದ್ದಂತೆ ಕಂದಕಕ್ಕೆ ಉರುಳಿ ಬಿದ್ದಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರು ಮೃತರಾಗಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತದೇಹಗಳನ್ನು ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯಕೀಯ ಮತ್ತು ಕಾನೂನು ಅವಶ್ಯಕತೆಗಳ ನಂತರ ಅವರ ಗುರುತು ಪತ್ತೆಹಚ್ಚಲಾಗುವುದು. ಮರಣೋತ್ತರ ಪರೀಕ್ಷೆ ಬಳಿಕ, ಮೃತದೇಹಗಳನ್ನು ಅಂತಿಮ ವಿಧಿವಿಧಾನಗಳಿಗಾಗಿ ಅವರ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ನಾಗಮಂಗಲದಲ್ಲಿ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಪತ್ರಕರ್ತ ಸಾವು - Journalist died in accident

ABOUT THE AUTHOR

...view details