ನಾಗ್ಪುರ (ಮಹಾರಾಷ್ಟ್ರ) :ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ.
ಅಂಬೇಡ್ಕರ್ ಅವರು ಆರ್‌ಎಸ್‌ಎಸ್ ನೀತಿಗಳ ವಿರೋಧಿಯಾಗಿದ್ದರು ಎಂಬ ಚರ್ಚೆ ನಡುವೆ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. "85 ವರ್ಷಗಳ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಮ್ಮ ಶಾಖೆಗೆ ಬಂದಿದ್ದರು. ನಮ್ಮೊಂದಿಗೆ ಆತ್ಮೀಯತೆ ಹೊಂದಿದ್ದರು" ಎಂದು ಆರ್‌ಎಸ್‌ಎಸ್ ಸಂವಹನ ವಿಭಾಗವಾದ ವಿಶ್ವ ಸಂವಾದ ಕೇಂದ್ರದ (ವಿಎಸ್‌ಕೆ) ವಿದರ್ಭ ಪ್ರಾಂತವು ಗುರುವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ.