ಹೈದರಾಬಾದ್: ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನವೇ ಭಕ್ತರಿಗೆ ದೊಡ್ಡ ಸಿಹಿ ಸಂಭ್ರಮ. ಆ ದೇವರ ಪ್ರಸಾದವೂ ದೇವರ ಅನುಗ್ರಹ ಎಂದೇ ಭಕ್ತರು ಭಾವಿಸುತ್ತಾರೆ. ಪ್ರಸಾದ ತಿಂಗಳಾದ ಬಳಿಕವೂ ತಮ್ಮ ರುಚಿ ಮತ್ತು ವಾಸನೆ ಕಳೆದುಕೊಳ್ಳುವುದಿಲ್ಲ ಎಂಬುದು ಮತ್ತೊಂದು ಗಮನಿಸಬೇಕಾದ ಅಂಶ. ತಿರುಪತಿಗೆ ಹೋಗುವ ಅನೇಕ ಮಂದಿಗೆ ಲಡ್ಡು ತರುವಂತೆ ಹೇಳುವುದು. ಇಲ್ಲವೇ ದರ್ಶನ ಮಾಡಿದವರ ಬಳಿ ಲಡ್ಡು ಪ್ರಸಾದ ಕೇಳಿ ಪಡೆಯುವುದು ಸಾಮಾನ್ಯ. ಇಂತಹ ಲಡ್ಡು ಪ್ರಸಾದವನ್ನು ಹೇಗೆ ತಯಾರಿಸುತ್ತಾರೆ. ಇದರ ರುಚಿ ಕೆಡದಂತೆ ವರ್ಷಾನುಗಟ್ಟಲೆ ಹೇಗೆ ಕಾಪಾಡಿಕೊಳ್ಳಲಾಗುವುದು. ಇದಕ್ಕೆ ಬಳಕೆ ಮಾಡುವ ಉತ್ಪನ್ನಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
15ನೇ ಶತಮಾನದಲ್ಲಿ ವಡೆಯೇ ಶ್ರೀವಾರಿ ಪ್ರಸಾದವಾಗಿತ್ತು:15ನೇ ಶತಮಾನದಲ್ಲಿ ಶ್ರೀನಿವಾಸನ ಪ್ರಸಾದ ಎಂದರೆ ಅದು ವಡೆ ಆಗಿತ್ತು. ಆ ಸಮಯದಲ್ಲಿ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಭಕ್ತರಿಗೆ ಯಾವುದೇ ಆಹಾರ ಮತ್ತು ವಸತಿ ಸೌಲಭ್ಯ ಇರಲಿಲ್ಲ. ಭಕ್ತರಿಗೆ ನೀಡುತ್ತಿದ್ದ ವಡೆ ಪ್ರಸಾದದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. 19ನೇ ಶತಮಾನದ ಸಮಯದಲ್ಲಿ ಸಿಹಿ ಬೂಂದಿಯನ್ನು ಪರಿಚಯಿಸಲಾಯಿತು. 1940ರ ಹೊತ್ತಿಗೆ ಬೂಂದಿಯನ್ನು ಲಡ್ಡುವಾಗಿ ಮಾರ್ಪಡಿಸಿ ಭಕ್ತರಿಗೆ ನೀಡಲಾಯಿತು.
ತಿರುಮಲ ಪ್ರಸಾದ (ಈಟಿವಿ ಭಾರತ್) ತಿರುಮಲದಲ್ಲಿ ಶ್ರಿವಾರಿ ನೈವೇದ್ಯಕ್ಕೆ ಅನೇಕ ಬಗೆಯ ಪ್ರಸಾದಗಳನ್ನು ಸಿದ್ದ ಮಾಡಲಾಗುತ್ತದೆ . ಅದರಲ್ಲಿ ಲಡ್ಡು ಹೆಚ್ಚು ಪ್ರಖ್ಯಾತಿ ಪಡೆದಿದೆ. ಈ ಪ್ರಸಾದಕ್ಕಾಗಿ ಅನೇಕ ರಾಜ ಮತ್ತು ರಾಣಿಯರು ಸಾಕಷ್ಟು ದಾನವನ್ನು ನೀಡಿದ್ದಾರೆ. 1803ರಲ್ಲಿ ಮದ್ರಾಸ್ ಸರ್ಕಾರ ದೇಗುಲದಲ್ಲಿ ಪ್ರಸಾದ ಮಾರಾಟವನ್ನು ಶುರು ಮಾಡಿತ್ತು. ಬೂಂದಿ ರೂಪದಲ್ಲಿ ಸಿಹಿ ಪ್ರಸಾದವಾಗಿ ಮಾರಾಟ ಮಾಡಲಾಗುತ್ತಿತ್ತು. ಬಳಿಕ ಲಡ್ಡುವಾಗಿ ಇದನ್ನು ಮಾರ್ಪಡು ಮಾಡಲಾಯಿತು.
ತಿರುಪತಿ ಲಡ್ಡು ಪ್ರಸಾದ (ಈಟಿವಿ ಭಾರತ್) ಆಗ ಒಂದು ಲಡ್ಡು ಪ್ರಸಾದವನ್ನು 25 ರೂಗೆ ಮಾರಾಟ ಮಾಡಲಾಗುತ್ತಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ 50 ರೂಗೆ ಒಂದು ಲಡ್ಡುವನ್ನು ಮಾರಾಟ ಮಾಡಲಾಗುತ್ತಿತ್ತು. ಕಲ್ಯಾಣಂ ಲಡ್ಡು ದರವನ್ನು 100 ರಿಂದ 200 ರೂಗೆ ಹೆಚ್ಚಿಸಲಾಗಿದೆ. ಒಂದು ವೇಳೆ, ಹೆಚ್ಚುವರಿ ಲಡ್ಡು ಬೇಕಾದರೆ, ಅದನ್ನು ಹಣ ಕೊಟ್ಟು ಪಡೆಯಬಹುದಾಗಿದೆ. ಇದರ ಹೊರತಾಗಿ ದರ್ಶನ ಪಡೆದ ಭಕ್ತರಿಗೆ ಉಚಿತ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಪ್ರಸಾದವನ್ನು ಶ್ರೀನಿವಾಸನ ದೇಗುಲದ ಗರ್ಭಗುಡಿಯ ಆಗ್ನೇಯ ದಿಕ್ಕಿನಲ್ಲಿ ಪೊಟು(ಅಡುಗೆ ಕೋಣೆ)ಯಲ್ಲಿ ತಯಾರಿಸಿ, ಅದನ್ನು ಮೊದಲಿಗೆ ವಕುಲಮಠಕ್ಕೆ ತೋರಿಸಿ, ಬಳಿಕ ದೇವರಿಗೆ ಅರ್ಪಿಸಲಾಗುವುದು.
ಪೋಟು ಹಾಗೂ ದಿಟ್ಟಂ ಎಂದರೇನು? ;ಪೋಟು ಎಂದು ತಿರುಪತಿಯಲ್ಲಿ ಲಡ್ಡು ತಯಾರಿಸುವ ಅಡುಗೆ ಮನೆ. ಇದು ದೇವಾಲಯದ ಸಂಪಂಗಿ ಪ್ರದಕ್ಷಿಣೆ ಪ್ರಾಕಾರದ ಒಳಗೆ ಇದೆ. ಮೊದಲು ಇಲ್ಲಿ ಸೌದೆ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಬಳಿಕ 1984ರಿಂದ ಅಡುಗೆ ಅನಿಲ ಬಳಸಿ ಲಡ್ಡು ತಯಾರಿಸಲಾಗುತ್ತಿದೆ.
ದಿಟ್ಟಂ ಎಂದರೆ ಲಡ್ಡು ತಯಾರಿಕೆಗೆ ಬೇಕಾಗುವ ಪದಾರ್ಥಗಳ ಪಟ್ಟಿ. ಈ ಪಟ್ಟಿಯಲ್ಲಿ ಇತಿಹಾಸದಲ್ಲಿ 6 ಬಾರಿ ಬದಲಾವಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಲಡ್ಡು ತಯಾರಿಕೆಗೆ ಬಳಕೆ ಮಾಡುವ ಉತ್ಪನ್ನಗಳ ಗುಣಮಟ್ಟ ಮತ್ತು ಪ್ರಮಾಣದ ಮಾಹಿತಿ ಇರುತ್ತದೆ. 1950ರಲ್ಲಿ ಈ ದಿಟ್ಟಂ ಮಾಡಲಾಯಿತು. ಬಳಿಕ 2001ರಲ್ಲಿ ತಿಟಿ ಎಂದು ಪರಿಷ್ಕರಿಸಿ ನಿರ್ದೇಶಿಸಲಾಯಿತು. ಇದನ್ನು ಪಡಿತರಂ ದುಟ್ಟಂ ಸ್ಕೇಲ್ ಎಂದು ಕರೆಯಲಾಗುವುದು. ಪಡಿ ಎಂದರೆ 51 ವಸ್ತು. ಆಹಾರಕ್ಕೆ ಬೇಕಾಗುವ ವಸ್ತುವನ್ನು ದಿಟ್ಟಂನಲ್ಲಿ ಇಡಲಾಗುವುದು. ಇದೇ ರೀತಿ ಉಗ್ರಾಣದಲ್ಲಿ ಸರಕುಗಳನ್ನು ಸಂಗ್ರಹಿಸಲಾಗುವುದು. 2001ರ ಅಂಕಿ ಅಂಶದ ಪ್ರಕಾರ, 5,100 ಲಡ್ಡು ತಯಾರಿಕೆಗೆ 803 ಕಚ್ಚಾ ವಸ್ತು ಬಳಕೆ ಮಾಡಲಾಗುತ್ತಿತ್ತು. ಸದ್ಯ, 3.50 ಲಕ್ಷ ಲಡ್ಡುಗಳನ್ನು ತಯಾರಿಸಲು ಪೋಟುಗಳಿಗೆ ಬೇಕಾದ ಮರದ ದಿಮ್ಮಿಗಳನ್ನು ಒದಗಿಸಲಾಗುತ್ತಿತ್ತು.
ಈ ಹಿಂದೆ, ಲಡ್ಡುವನ್ನು ಕಟ್ಟಿಗೆ ಒಲೆಯಲ್ಲಿ ಮಾಡಲಾಗುತ್ತಿತ್ತು. ದೇಗುಲದಲ್ಲಿ ಹೆಚ್ಚಿನ ಹೊಗೆ ಹಿನ್ನಲೆ ಬಳಿಕ ಗ್ಯಾಸ್ ಸ್ಟೋವ್ ಬಳಕೆ ಮಾಡಲಾಯಿತು. 15 ವರ್ಷದ ಹಿಂದೆ ದೇಗುಲದ ಉತ್ತರ ಭಾಗದಲ್ಲಿ ಬುಂಡಿಪೊಟ್ಟುವನ್ನು ಸ್ಥಾಪಿಸಲಾಯಿತು. ಬೂಂದಿಯನ್ನು ಹೊರಗೆ ತಯಾರಿಸಿ ಕನ್ವೇಯರ್ ಬೆಲ್ಟ್ ಮೂಲಕ ದೇವಸ್ಥಾನಕ್ಕೆ ತರಲಾಗುವುದು. ನಂತರ, ಟ್ರೇಗಳನ್ನು ಕನ್ವೇಯರ್ ಬೆಲ್ಟ್ ಮೂಲಕ ದೇವಾಲಯದ ಹೊರಗಿನ ಲಡ್ಡು ಕೇಂದ್ರಕ್ಕೆ ಸಾಗಿಸಲಾಗುತ್ತದೆ.
ಲಡ್ಡುಗಳ ಗಾತ್ರ
- ಸಣ್ಣ ಲಡ್ಡುಗಳು: 140 -170 ಗ್ರಾಂ
- ಕಲ್ಯಾಣಂ ಲಡ್ಡು: 700 ಗ್ರಾಂ
- ದಿನವೊಂದಕ್ಕೆ ಮಾಡುವ ಸಣ್ಣ ಸಿಹಿ ತುಂಡು: 3.5 ಲಕ್ಷ
- ದಿನವೊಂದಕ್ಕೆ ತಯಾರಿಸುವ ಕಲ್ಯಾಣಂ ಲಡ್ಡು: 7100
- ದಿನವೊಂದಕ್ಕೆ ತಯಾರಿಸಲಾಗುವುದು ವಾಡೆ: 4 ಸಾವಿರ
- ದಿನವೊಂದಕ್ಕೆ ತಯಾರಿಸುವ ಸಣ್ಣು ಲಡ್ಡುಗಳು (ಉಚಿತ ವಿತರಣೆ): 1,07,100
ಆಗಂ ಶಾಸ್ತ್ರದಲ್ಲಿ ತಿಳಿಸಿದಂತೆ 50 ಬಗೆಯ ಪ್ರಸಾದವನ್ನು ಶ್ರೀನಿವಾಸನಿಗೆ ಅರ್ಪಿಸಲಾಗುತ್ತದೆ. ಭಗವಂತನಿಗೆ ಅರ್ಪಿಸುವ ಪ್ರಸಾದಗಳಲ್ಲಿ ಹಲವು ವಿಶೇಷತೆಗಳಿವೆ. ಶ್ರೀ ರಾಮಾನುಜಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಹಾಕಿಕೊಟ್ಟ ನಿಯಮಗಳ ಪ್ರಕಾರ ಇಂದಿಗೂ ಶ್ರೀಗಳಿಗೆ ನೈವೇದ್ಯ ಸಲ್ಲಿಸಲಾಗುತ್ತದೆ. ಮುಂಜಾನೆಯಿಂದ ರಾತ್ರಿವರೆಗೆ ಸೇವೆಗಳನ್ನು ನೀಡಲಾಗುವುದು. ನಿತ್ಯ ದೈನಂದಿನ ಸೇವೆಯಲ್ಲಿ ವಿವಿಧ ಬಗೆಯ ಪ್ರಸಾದ ಅರ್ಪಣೆ ಮಾಡಲಾಗುವುದು.
- ಮುಂಜಾನೆ ನವನೀತಂ ಮತ್ತು ಗೋಕ್ಷೀರಂ ಅರ್ಪಣೆ ಮಾಡಲಾಗುತ್ತದೆ
- ತೋಮಾಲ ಮುಗಿದ ನಂತರ ಕೊಲುವಿನ ಸಮಯದಲ್ಲಿ ಕರಿಬೇವು, ಬೆಲ್ಲ, ಶುಂಠಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.
- ಸಹಸ್ರನಾಮಾರ್ಚನೆಯ ನಂತರದ ಮೊದಲ ಘಳಿಗೆಯಲ್ಲಿ ಸ್ವಾಮಿಗೆ ಮೀಗಡ, ಬೆಣ್ಣೆ ಮತ್ತು ಮೊಸರಿನೊಂದಿಗೆ ಮಾಡಿದ ಅನ್ನವನ್ನು ನೈವೇದ್ಯ ಮಾಡಲಾಗುತ್ತದೆ.
- ಭಗವಂತನಿಗೆ ಪ್ರತಿದಿನ ಚಿತ್ರಾನ್ನ, ದದ್ದೋಜನಂ, ಕ್ಷೀರನ್ನ, ಕದಂಬಂ ಮತ್ತು ಪಾಯಸವನ್ನು ಅರ್ಪಿಸಲಾಗುತ್ತದೆ.
- ಮಧ್ಯಾಹ್ನದ ಪೂಜೆಯಲ್ಲಿ ನಡುಕಂ, ಲಡ್ಡು, ದೋಸೆ, ವಡೆ ಮತ್ತು ಅಪ್ಪಂಗಳನ್ನು ನೀಡಲಾಗುತ್ತದೆ.
- ಸಂಜೆ ಅಷ್ಟೋತ್ತರ ಶತನಾಮಾರ್ಚನೆ ನಂತರ ಶುದ್ಧಾನ್ನ, ಸೀರೆ ನಿವೇದನೆ ನಡೆಯಲಿದೆ.
- ರಾತ್ರಿ ನೈವೇದ್ಯದ ಸಮಯದಲ್ಲಿ ತೋಮದ ನಂತರ ಕಾಳುಮೆಣಸಿನಿಂದ ಮಾಡಿದ ಮಾರೀಚನ್ನಂ ಮತ್ತು ಉದಾನ್ನಂಗಳನ್ನು ಅರ್ಪಿಸಲಾಗುತ್ತದೆ.
- ರಾತ್ರಿ ಪೂಜೆಯ ನಂತರ ಏಕಾಂತ ಸೇವೆಯಲ್ಲಿ ಪಾಯಸವನ್ನು ನೈವೇದ್ಯವಾಗಿ ನೀಡಲಾಗುತ್ತದೆ.
ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ತಮಿಳುನಾಡಿನ ಡೈರಿಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ ಆರೋಗ್ಯ ಇಲಾಖೆ