ಕರ್ನಾಟಕ

karnataka

ETV Bharat / bharat

ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ ₹ 50,000 ದಂಡ - Delhi tis hazari court

ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣದ ಅಪರಾಧಿಗಳಿಗೆ ತೀಸ್ ಹಜಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ತೀಸ್ ಹಜಾರಿ ನ್ಯಾಯಾಲಯ
ತೀಸ್ ಹಜಾರಿ ನ್ಯಾಯಾಲಯ

By ETV Bharat Karnataka Team

Published : Mar 7, 2024, 7:18 PM IST

ನವದೆಹಲಿ :ದೆಹಲಿಯ ರಘುವೀರ್ ನಗರದಲ್ಲಿ ನಡೆದ ಫೋಟೋಗ್ರಾಫರ್ ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮೂವರು ಆರೋಪಿಗಳಿಗೆ ತೀಸ್ ಹಜಾರಿ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ಮೂವರು ಆರೋಪಿಗಳಿಗೆ ತಲಾ ₹ 50 ಸಾವಿರ ದಂಡ ವಿಧಿಸಿದೆ. ಈ ಪ್ರಸಿದ್ಧ ಪ್ರಕರಣದ ತೀರ್ಪು ಆರು ವರ್ಷಗಳ ನಂತರ ಬಂದಿದೆ. ಕೊಲೆ ನಡೆಸಿದವರಲ್ಲಿ ಮೊಹಮ್ಮದ್ ಸಲೀಂ, ಅಕ್ಬರ್ ಅಲಿ ಮತ್ತು ಅಕ್ಬರ್ ಅಲಿ ಅವರ ಪತ್ನಿ ಶಹನಾಜ್ ಬೇಗಂ ಸೇರಿದ್ದಾರೆ.

ಘಟನೆಯ ಹಿನ್ನೆಲೆ: ಅನ್ಯ ಧರ್ಮದ ಹುಡುಗಿಯೊಂದಿಗಿನ ಅಂಕಿತ್ ಸ್ನೇಹಕ್ಕೆ ಹುಡುಗಿಯ ಪೋಷಕರು ಮತ್ತು ತಾಯಿಯ ಚಿಕ್ಕಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊಲೆ ಮಾಡುವ ಮುನ್ನ ಮೂವರು ಅಂಕಿತ್‌ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದೇ ವೇಳೆ, ಅಂಕಿತ್ ಕುಟುಂಬಸ್ಥರಿಗೆ ಮಾರಾಮಾರಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಾಗ ಅವರೂ ಸ್ಥಳಕ್ಕೆ ಬಂದು ಮಧ್ಯಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ, ಈ ವೇಳೆ ಹುಡುಗಿಯ ತಾಯಿಯ ಚಿಕ್ಕಪ್ಪ ಚಾಕು ತೆಗೆದುಕೊಂಡು ಅಂಕಿತ್ ಕುತ್ತಿಗೆಗೆ ಇರಿದಿದ್ದಾರೆ. ಇದರಿಂದಾಗಿ ಅಂಕಿತ್ ಗಾಯಗೊಂಡಿದ್ದಾರೆ. ಇದಾದ ನಂತರ ಅಂಕಿತ್‌ನ ತಾಯಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯ ನಂತರ ಸಾಕಷ್ಟು ಕೋಲಾಹಲ ಮತ್ತು ಪ್ರತಿಭಟನೆಗಳು ನಡೆದಿವೆ.

ನೇಣಿಗೇರಿದ ನಂತರ ಸಾಂತ್ವನ : ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಂದ ಹಿಡಿದು ಬಿಜೆಪಿಯ ಅನೇಕ ದೊಡ್ಡ ನಾಯಕರು ಅಂಕಿತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಂಕಿತ್ ತಂದೆ ತೀರಿಕೊಂಡಿದ್ದಾರೆ. ಅಂಕಿತ್ ಅವರ ತಾಯಿ ಕಮಲೇಶ್ ಸಕ್ಸೇನಾ ಅವರು ತಮ್ಮ ಎದುರೇ ಅಂಕಿತ್‌ನನ್ನು ಕೊಲೆ ಮಾಡಿದ ರೀತಿ ಇಡೀ ಕುಟುಂಬವನ್ನು ಕಂಗೆಡಿಸಿದೆ ಎಂದು ಹೇಳಿದ್ದಾರೆ. ಈಗ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಆರೋಪಿಗಳನ್ನು ಗಲ್ಲಿಗೇರಿಸಿದರೆ ಮಾತ್ರ ನನಗೆ ಸಮಾಧಾನ ಎಂದಿದ್ದಾರೆ. ಹೀಗಾಗಿ ಆರೋಪಿಗೆ ವಿಧಿಸಿರುವ ದಂಡದ ಮೊತ್ತವನ್ನು ಅಂಕಿತ್ ತಾಯಿಗೆ ನೀಡಲಾಗುತ್ತದೆ ಎಂಬುದು ತಿಳಿದು ಬಂದಿದೆ.

ಕಳೆದ ವರ್ಷ ಶಿಕ್ಷೆ ಪ್ರಕಟ : ನ್ಯಾಯಾಲಯದ ಪ್ರಕಾರ, ಈ ಅಪರಾಧಿಗಳ ವಯಸ್ಸು ಮತ್ತು ಕ್ರಿಮಿನಲ್ ದಾಖಲೆ ಪರಿಗಣಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವೈಜ್ಞಾನಿಕ ಪುರಾವೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಡಿಸೆಂಬರ್ 23, 2023 ರಂದು ತೀಸ್ ಹಜಾರಿ ನ್ಯಾಯಾಲಯದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುನೀಲ್ ಕುಮಾರ್ ಶರ್ಮಾ ಅವರ ಪೀಠದ ಮುಂದೆ ಮೂವರೂ ಆರೋಪಿಗಳು ಕೊಲೆಯ ತಪ್ಪಿತಸ್ಥರೆಂದು ಸಾಬೀತಾಗಿದೆ.

ಅದರ ಆಧಾರದ ಮೇಲೆ ಈಗ ಶಿಕ್ಷೆಯನ್ನು ಘೋಷಿಸಲಾಗಿದೆ. ಅಂಕಿತ್ ಸಕ್ಸೇನಾ ಹತ್ಯೆಯಲ್ಲಿ ಬಾಲಕಿಯ ಪೋಷಕರು ಮತ್ತು ಆಕೆಯ ತಾಯಿಯ ಚಿಕ್ಕಪ್ಪ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿರುವುದು ಗಮನಾರ್ಹ. ಪ್ರಕರಣದಲ್ಲಿ ನ್ಯಾಯಾಲಯವು ದೆಹಲಿ ಪೊಲೀಸರ ಪರವಾಗಿ 28 ಸಾಕ್ಷಿಗಳ ಹೇಳಿಕೆಗಳನ್ನು ಮತ್ತು ಅವರು ಸಲ್ಲಿಸಿದ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿದೆ. ಇದರಲ್ಲಿ ಅಂಕಿತ್ ಸಕ್ಸೇನಾ ತಂದೆ ಮತ್ತು ದೂರುದಾರ ಯಶಪಾಲ್ ಸಕ್ಸೇನಾ, ತಾಯಿ ಕಮಲೇಶ್ ಮತ್ತು ಅಂಕಿತ್ ಅವರ ಇಬ್ಬರು ಸ್ನೇಹಿತರಾದ ನಿತಿನ್ ಮತ್ತು ಅನ್ಮೋಲ್ ಸಿಂಗ್ ಅವರ ಹೇಳಿಕೆಗಳು ಪ್ರಮುಖವಾಗಿವೆ.

ಇದನ್ನೂ ಓದಿ :ಯುವತಿ ಮೇಲೆ ಆ್ಯಸಿಡ್ ದಾಳಿ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹ 40 ಲಕ್ಷ ದಂಡ ವಿಧಿಸಿದ ಕೋರ್ಟ್

ABOUT THE AUTHOR

...view details